ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಬಳ್ಳಾರಿಗೆ ಹೋಗಿದ್ದರು. ಈ ನಟ ಬೆಂಗಳೂರಿನಿಂದ ಸ್ಪೆಷಲ್ ಪ್ರಯಾಣ ಮಾಡಿದ್ದು, ಅಲ್ಲಿಯ ಜನರು ನೆಚ್ಚಿನ ನಟನನ್ನು ನೋಡಿ ಹುಚ್ಚೆದ್ದು ಕುಣಿದಿದ್ದಾರೆ. ಈ ನಟ ಕೆರೆಯ ಜೀರ್ಣೋದ್ಧಾರ ಕೆಲಸ ಮಾಡಲು ಹೋಗಿದ್ದರು. ಆದರೇ ಈ ಬಾರಿ ರಾಕಿಭಾಯ್ ಬಳ್ಳಾರಿಗೆ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದರು. ಇದಕ್ಕೆ ಕಾರಣ ಹಂಚಿಕೆದಾರ ಸಾಯಿಯವರು. ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1 ಅನ್ನು ಅದ್ಧೂರಿಯಾಗಿ ಅಷ್ಟೇ ಪ್ಯಾಶಿನೇಟ್ ರೀತಿಯಲ್ಲಿ ಸಾಯಿ ರಿಲೀಸ್ ಮಾಡಿದ್ದರು.
ರಾಕಿಂಗ್ ಸ್ಟಾರ್ ಬಳ್ಳಾರಿಗೆ ಬಂದಾಗ ಬಿಳಿ ಧೋತಿ ಮತ್ತು ಶಾಲು ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದನ್ನು ನೋಡ್ತಾಯಿದ್ದರೇ ಯಶ್ ರಾಜಕೀಯ ಎಂಟ್ರಿ ಎಂಬುದರ ಬಗ್ಗೆ ಪ್ರಶ್ನೆ ಕಾಡ್ತಾಯಿದ್ದು, ಸದ್ಯ ಈ ನಟ ಪ್ರತಿಕ್ರಿಯಿಸಿದ್ದಾರೆ. ನಟ ಯಶ್ ಮಾತನಾಡುತ್ತಾ “ನಾನು ರಾಜಕೀಯಕ್ಕೆ ಬರಲ್ಲ. ನನಗೆ ಆಸಕ್ತಿ ಇಲ್ಲ. ‘ಟಾಕ್ಸಿಕ್’ ಸಿನಿಮಾ ಬಿಟ್ಟು ಯಾವುದರ ಕಡೆ ಕೂಡ ಗಮನ ಕೊಡುತ್ತಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


