ಬೆಂಗಳೂರು: ನನಗೆ ರಾಜಕಾರಣ ಗೊತ್ತಿಲ್ಲ, ಸದ್ಯಕ್ಕೆ ನಾನು ಈ ಕ್ಷೇತ್ರಕ್ಕೆ ಬರಲ್ಲ ಎಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಮೂಲಕ ಡಾಲಿ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವ ವದಂತಿ ಬಗ್ಗೆ ಉತ್ತರಿಸಿದ ಅವರು, ಸಿನಿಮಾ ರಂಗದಲ್ಲಿ ಸಾಕಷ್ಟು ಕನಸು ಇದೆ ಅಲ್ಲೇ ಕೆಲಸ ಮಾಡ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಲಿಡ್ಕರ್ ಗೆ ಬ್ರಾಂಡ್ ರಾಯಭಾರಿ ಆಗಿರುವುದು, ಅದನ್ನು ನಂಬಿ ಸಾವಿರಾರು ಬಡ ಕುಟುಂಬಗಳು ಇವೆ. ಅದಕ್ಕೆ ನಾನು ಒಪ್ಪಿಕೊಂಡೆ. ಕಲಾವಿದರಾಗಿ ನಾವು ಎಮೊಷನಲ್ ಆಗಿರ್ತಿವಿ. ಪಾಲಿಟಿಕ್ಸ್ ಗೆ ಬೇಕಿರುವುದು ಬೇರೆ ಮೈಂಡ್ ಸೆಟ್. ರಾಜಕಾರಣ ಬೇರೆ ನಾಯಕನಾಗಿರುವುದು ಬೇರೆ ಅದರದೆ ಕ್ವಾಲಿಟಿಸ್ ಇರುತ್ತೆ. ರಾಜಕೀಯ ನಿಭಾಯಿಸುವ ಶಕ್ತಿ ಇರಬೇಕು ಎಂದು ಅವರು ಹೇಳಿದರು.


