ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ನಟಿ ಶ್ರೀದೇವಿ ಎಂದರೆ ಎಲ್ಲಿಲ್ಲದ ಅಭಿಮಾನ. ವರ್ಮಾ ಆಗಾಗ ಶ್ರೀದೇವಿ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಶ್ರೀದೇವಿಯ ಸೌಂದರ್ಯವನ್ನು ಸಾಕಷ್ಟು ಬಾರಿ ಹೊಗಳಿದ್ದಾರೆ. ಶ್ರೀದೇವಿ ಮರಣ ಹೊಂದಿದ್ದಾಗ ಕಣ್ಣೀರಿಟ್ಟಿದ್ದ ವರ್ಮಾ ಇದೀಗ ಆಕೆಯನ್ನು ಸ್ವರ್ಗಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದಾಗಿ ಹೇಳಿದ್ದಾರೆ.
ಶ್ರೀದೇವಿ ರಾಮ್ ಗೋಪಾಲ್ ವರ್ಮಾ ಜೊತೆ ಎರಡು ಸಿನಿಮಾ ಮಾಡಿದ್ದಾರೆ. ಅವರು ವರ್ಮಾ ನಿರ್ದೇಶನದ ಗೋವಿಂದಾ ಗೋವಿಂದಾ ಮತ್ತು ಕ್ಷಣ ಸಂಶಂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ಸೂಪರ್ ಹಿಟ್ ಆದವು. ಆ ವೇಳೆ ಶ್ರೀದೇವಿಗೆ ತೀರಾ ಹತ್ತಿರವಾದ ವರ್ಮಾ ಅಂದಿನಿಂದ, ಅನೇಕ ಸಂದರ್ಶನಗಳಲ್ಲಿ ಶ್ರೀದೇವಿ ಬಗ್ಗೆ ತಮ್ಮ ಭಾವನೆಗಳನ್ನು ಆರ್ ಜಿವಿ ಬಹಿರಂಗಪಡಿಸಿದ್ದಾರೆ.
ಶ್ರೀದೇವಿ ಅಗಲಿಕೆಯ ನಂತರವೂ ನಟಿಯ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ ವರ್ಮಾ. ಕಾರಿನಲ್ಲಿ ಡ್ರೈವರ್ ಸೀಟ್ ನಲ್ಲಿ ಶ್ರೀದೇವಿ ಕುಳಿತಿದ್ದು, ಅದರ ಪಕ್ಕದ ಸೀಟಿನಲ್ಲಿ ಸಿಗರೇಟು ಹಿಡಿದುಕೊಂಡು ವರ್ಮಾ ಕೂತಿದ್ದಾರೆ. ಈ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಶ್ರೀದೇವಿ ಅವರನ್ನು ಭೇಟಿ ಮಾಡೋಕೆ ಸ್ವರ್ಗಕ್ಕೆ ಹೋಗಿದ್ದೆ ಎಂದು ಬರೆದುಕೊಂಡಿದ್ದಾರೆ. ವಾಸ್ತವವಾಗಿ ಇದು ತಂತ್ರಜ್ಞಾನ ಬಳಸಿ ಎಡಿಟ್ ಮಾಡಿದ ಚಿತ್ರ. ಆದರೆ ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


