ನನಗೆ ಎಲ್ಲರ ಕಥೆಯೂ ಗೊತ್ತಿದೆ. ಯಾರು, ಯಾವಾಗ, ಯಾರ ಹತ್ತಿರ, ಏನು ಮಾತನ್ನಾಡಿದ್ದಾರೆ? ನಮ್ಮ ಅಶೋಕ್ ಚಕ್ರವರ್ತಿ, ನವರಂಗಿ ನಾರಾಯಣ, ಮಹಾಲಕ್ಷ್ಮಿಲೇಔಟ್ ಎಂಎಲ್, ಕುಮಾರಸ್ವಾಮಿ, ಹೀಗೆ ಎಲ್ಲರೂ ಏನೇನು ಮಾತನ್ನಾಡಿದ್ದಾರೆ? ಎಂಬುದು ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ-ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರ ಅನುದಾನ ತಡೆ ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಖುದ್ದು ಗುತ್ತಿಗೆದಾರರೇ ಇಂದು ಡಿಕೆಶಿ ಅವರಿಗೂ ಅನುದಾನ ತಡೆಹಿಡಿದಿರುವುದಕ್ಕೂ ಸಂಬಂಧ ಇಲ್ಲ ಎಂದು ಯೂಟರ್ನ್ ಹೊಡೆದಿರುವ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನವರಂಗಿ ನಾರಾಯಣ, ಅಶೋಕ ಚಕ್ರವರ್ತಿ, ಗೋಪಾಲಯ್ಯ ಎಲ್ಲರ ಕಥೆಯನ್ನು ಹೇಳುತ್ತೇನೆ ಎನ್ನುವ ಮೂಲಕ ಗುತ್ತಿಗೆದಾರರ ವಿಚಾರ ಇನ್ನೊಮ್ಮೆ ಮಾತನ್ನಾಡುತ್ತೇನೆ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


