ಬೆಂಗಳೂರು: ಕೆ.ಎಲ್ ರಾಹುಲ್ ಬ್ಯಾಟಿಂಗ್ ತುಂಬಾನೇ ಇಷ್ಟ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಕೆ.ಎಲ್ ರಾಹುಲ್ ಹೋಂ ಗ್ರೌಂಡ್ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಕರ್ನಾಟಕದವರು. ಅವರು ಎಲ್ಲೇ ಆಡಿದ್ರು, ಕರ್ನಾಟಕದವರು ತಾನೇ ಎಂದಿದ್ದಾರೆ.
ನನಗೆ ಅವರ ಬ್ಯಾಟಿಂಗ್ ತುಂಬಾ ಇಷ್ಟ. ಆವರು ಆಡಿದಾಗಲೆಲ್ಲಾ ಔಟೇ ಆಗಬಾರದು ಎಂದುಕೊಳ್ಳುತ್ತಿರುತ್ತೇನೆ. ವಿರಾಟ್ ಕೊಹ್ಲಿ ಚೆನ್ನಾಗಿ ಆಡ್ತಾರೆ. ಹಾಗೆಯೇ ರಾಹುಲ್ ಬ್ಯಾಟಿಂಗ್ ಸ್ಟೈಲ್ ನೋಡಿದಾಗ ಹೆಮ್ಮೆ ಎಂದೆನಿಸುತ್ತದೆ. ಯಾರ್ ಗೆದ್ರೂ ಕೂಡ ಕಪ್ ಇಂಡಿಯಾದಲ್ಲೇ ಇರುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತ್ತು. ಗೆಲುವಿನ ಸಂಭ್ರಮದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ್ದರು. ಬಳಿಕ ಕಾಂತಾರ ನನ್ನ ಫೇವರಿಟ್ ಸಿನಿಮಾ, ಸಿನಿಮಾದಲ್ಲಿರುವಂತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದರು.
ಪಂದ್ಯದಲ್ಲಿ ಗೆದ್ದಾಗ ನನಗೆ ಆ ಸಿನಿಮಾದ ದೃಶ್ಯ ನೆನಪಾಯಿತು. ಹಾಗಾಗಿ ನಾನು ಅದೇ ರೀತಿ ಮಾಡಿದೆ. ಅದು ನನ್ನ ನೆಚ್ಚಿನ ಸಿನಿಮಾ. ಈ ಕ್ರೀಡಾಂಗಣ, ಈ ನೆಲ ಇದೆಲ್ಲ ನಾನು ಹುಟ್ಟಿ ಬೆಳೆದ ಜಾಗ. ಇದೆಲ್ಲ ನನ್ನದು ಎಂದು ಕೆ.ಎಲ್.ರಾಹುಲ್ ಹೇಳಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW