ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಚಂದನ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹಾಗೇ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಚಂದನ್ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಬಗ್ಗೆ, ಹಾಗೇ ಕರಿಯರ್ ಕುರಿತಾಗಿ ಹಲವಾರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆಂಕರ್ ರ್‍ಯಾಪಿಡ್ ರಶ್ಮಿ ಅವರ ಯುಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿರುವ ಚಂದನ್ ಶೆಟ್ಟಿಯವರು ತಮ್ಮ ಲೈಫ್‌ನ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ನಡೆದು ಬಂದ ದಾರಿ, ಬಸ್ಸಿನಲ್ಲಿ ಹೋಗುತ್ತಿದ್ದ ತಾವು ಇಂದು ಈ ಮಟ್ಟಿಗೆ ಬೆಳೆಯಲು ಕಾರಣ ಎಲ್ಲವುಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಜೀವನ ಕಲಿಸಿದ ಪಾಠದ ಕುರಿತು ಮಾತನಾಡಿದ ಅವರು, ನಾನು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದೆ. ಗೆಜೆಟ್‌ಗಳನ್ನು ವಿಪರೀತ ಖರೀದಿ ಮಾಡುತ್ತಿದ್ದೆ. ಕೋವಿಡ್ ನನಗೆ ಪಾಠ ಕಲಿಸಿತು , ನಾನು ಮಾಡಿದ ಪ್ರಾಜೆಕ್ಟ್‌ಗಳಿಂದ ತುಂಬಾ ಸಕ್ಸಸ್ ಸಿಗುತ್ತದೆ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಕೋವಿಡ್ ಬಂದು ಬರಸಿಡಿಲು ಬಡಿಯಿತು. ಆಗಷ್ಟೇ ನನ್ನ ಮದುವೆಯಾಯಿತು. ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಮಾಡಿಬಿಟ್ಟೆ. ಮದುವೆಯಾಗುತ್ತಲೇ ಕೋವಿಡ್ ಬಂತು. ಹಣದ ಕೊರತೆ ಉಂಟಾಗಿ ಇದೆಲ್ಲಾ ನನಗೆ ಬೇಕಿತ್ತಾ ಎಂದು ಎನ್ನಿಸಿತು. ತುಂಬಾ ಕಷ್ಟಪಟ್ಟುಬಿಟ್ಟೆ. ಕೊನೆಗೆ ನಿಧಾನವಾಗಿ ಮೇಲಕ್ಕೆ ಬಂದೆ ಎಂದು ಅಂದಿನ ದಿನಗಳನ್ನು ಚಂದನ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ.
ಜೀವನದಲ್ಲಿಯೂ ಹಾಗೇ ಇವತ್ತು ಬದುಕ್ಕಿದ್ದೀಯಾ, ಅಷ್ಟೇ ನಾಳೆ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ಇರುವಷ್ಟು ದಿನ ನಾಲ್ಕು ಜನ ಮುಂದೆ ಚೆನ್ನಾಗಿ ಇರಬೇಕು. ನೀವು ಜೀವನದಲ್ಲಿ ಮುಂದೆ ಬರುತ್ತಿದ್ದಂತೆ ಹಿಂದೆ ಬೈಕೊಂಡು ಬರೋರು ಬರ್ತಾನೆ ಇರ್ತಾರೆ. ಮನುಷ್ಯರ ಜೀವನ ಕೂಡ ಪ್ರಕೃತಿ ತರ. ಒಂದೊಂದು ಸಲ ಖುಷಿ, ಒಂದೊಂದು ಸಲ ಬೇಜಾರು ಎಲ್ಲ ಇರುತ್ತದೆʼʼಎಂದು ಹೇಳಿದರು ಚಂದನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


