IBPS (ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅಸಿಸ್ಟಂಟ್, ಆಫೀಸರ್ ಸ್ಕೇಲ್(ವಿವಿಧ ಹಂತ) ಹುದ್ದೆಗಳ ಭರ್ತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 8,106 ಹುದ್ದೆಗಳಿದ್ದು, ಜೂನ್ 27 ರವರೆಗೆ ಆನ್‌ಲೈನ್ ಅಪ್ಲಿಕೇಶನ್ ಹಾಕಬಹುದು. ಸಿಎ, ಬ್ಯಾಚುಲರ್ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಈ ಕೆಳಗಿದೆ ನೋಡಿ..
ಹುದ್ದೆಗಳ ವಿವರ:
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪಸ್ ) : 4483
ಆಫೀಸರ್ ಸ್ಕೇಲ್-1: 2676
ಆಫೀಸರ್ ಸ್ಕೇಲ್-2 (ಅಗ್ರಿಕಲ್ಚರ್ ಆಫೀಸರ್): 12
ಆಫೀಸರ್ ಸ್ಕೇಲ್-2 (ಮಾರ್ಕೆಟಿಂಗ್ ಮ್ಯಾನೇಜರ್) :06
ಆಫೀಸರ್ ಸ್ಕೇಲ್-2(ಟ್ರೆಸರಿ ಮ್ಯಾನೇಜರ್): 10
ಆಫೀಸರ್ ಸ್ಕೇಲ್-2 (Law): 18
ಆಫೀಸರ್ ಸ್ಕೇಲ್-2 (CA) :19
ಆಫೀಸರ್ ಸ್ಕೇಲ್-2 (IT): 57
ಆಫೀಸರ್ ಸ್ಕೇಲ್-2 (ಜೆನೆರಲ್ ಬ್ಯಾಂಕಿಂಗ್ ಆಫೀಸರ್) – 745
ಆಫೀಸರ್ ಸ್ಕೇಲ್-3 : 80
ವಿದ್ಯಾರ್ಹತೆ:
ಐಬಿಪಿಎಸ್ ಆರ್‌ಆರ್‌ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಿಎ / ಬ್ಯಾಚುಲರ್ ಡಿಗ್ರಿ/ ಎಂಬಿಎ (ಸಂಬಂಧಿಸಿದ ವಿಷಯ) ಪಾಸ್ ಮಾಡಿರಬೇಕು. ಆಫೀಸರ್ ಸ್ಕೇಲ್-2, 3 ಹುದ್ದೆಗಳಿಗೆ ಕಾರ್ಯಾನುಭವಗಳನ್ನು ನೋಟಿಫಿಕೇಶನ್‌ನಲ್ಲಿ ರೆಫರ್ ಮಾಡಬಹುದು.
ವಯೋಮಿತಿ ಅರ್ಹತೆಗಳು:
ಕನಿಷ್ಠ 18 ವರ್ಷ ಆಗಿರುವ, ಗರಿಷ್ಠ 40 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆವಾರು ವಯಸ್ಸಿನ ಅರ್ಹತೆಗಳನ್ನು ನೋಟಿಫಿಕೇಶನ್‌ನಲ್ಲಿ ರೆಫರ್ ಮಾಡಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ?:
ಆನ್ ಲೈನ್ ಪರೀಕ್ಷೆ (ಪ್ರಿಲಿಮಿನರಿ, ಮುಖ್ಯ ಪರೀಕ್ಷೆ) ಜತೆಗೆ, ಸಂದರ್ಶನವನ್ನು ನಡೆಸಿ ಮೇಲೆ ತಿಳಿಸಿದ ವಿವಿಧ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ವೇತನ ವಿವರ : INR 15000 to 39000 /Month
ಪ್ರಮುಖ ದಿನಾಂಕಗಳು
ಆನ್ ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭ : 07-06-2022
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 27-06-2022
ಅಪ್ಲಿಕೇಶನ್ ಶುಲ್ಕ ಎಷ್ಟು ?
ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ 175 ರೂ.
ಸಾಮಾನ್ಯ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 850 ರೂ.
ಅಪ್ಲಿಕೇಶನ್ ಸಲ್ಲಿಸುವ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ವೆಬ್ ಸೈಟ್ : https://www.ibps.in/
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5