ಎಚ್.ಡಿ. ಕೋಟೆ: ಭಾರತಕ್ಕೆ ಅಂಬೇಡ್ಕರ್ ಸಂವಿಧಾನವನ್ನು ನೀಡದಿದ್ದಲ್ಲಿ ಇಂದು ನಾನು ಶಾಸಕನಾಗಲು ಆಗುತ್ತಿರಲಿಲ್ಲ, ಅದೇ ರೀತ ಟೀ ಮಾರುವ ವ್ಯಕ್ತಿಯೋರ್ವ ದೇಶದ ಪ್ರಧಾನಿಯಾಗಲೂ ಸಹ ಆಗುತ್ತಿರಲಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 75 ನೇ ಗಣರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೇವಲ ಒಂದು ಜಾತಿಗಾಗಲಿ, ಒಂದು ಧರ್ಮಕ್ಕಾಗಲಿ ಸಂವಿಧಾನವನ್ನು ನೀಡಿಲ್ಲ, ಎಲ್ಲರಿಗೂ ಸಹ ಸಮಾನವಾದ ಸಂವಿಧಾನವನ್ನು ನೀಡಿದ್ದಾರೆ ಎಂದರು.
ತಾಲ್ಲೂಕಿನ ಕೆಲ ಅಧಿಕಾರಿ ವರ್ಗದವರು ಸಮಗ್ರವಾಗಿ ಗಣರಾಜ್ಯೋತ್ಸವ ಆಚರಿಸಲು ಸಹಕರಿಸಿಲ್ಲ, ಅಂತಹವರಿಗೆ ತಹಸೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಲಾಗುವುದು, ಮುಂದಿನ ಭಾರಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ಭಾರತವನ್ನು ಗಣರಾಜ್ಯವಾಗಲು ಅನೇಕ ದಾರ್ಶನಿಕರ ತ್ಯಾಗ ಬಲಿದಾನವು ಕಾರಣವಾಗಿದೆ. ಇದು ದೇಶದ ಗಣರಾಜ್ಯವಲ್ಲದೇ ದೇಶದ ಪ್ರಜೆಗಳು ಎಚ್ಚೆತ್ತುಕೊಳ್ಳುವ ದಿನ ಇದಾಗಿದೆ ಎಂದರು.
ನಾವು ಈ ದೇಶದ ಉತ್ತಮ ನಾಗರೀಕರಾಗಲು ಮತ್ತು ದೇಶವನ್ನು ಉನ್ನತ ಮಟ್ಟದಲ್ಲಿ ಬೆಳೆಯಲು ನಾವು ಶ್ರಮಿಸಬೇಕು ಎಂದರು. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ಗಣರಾಜ್ಯವು ತಿಳಿಸುತ್ತದೆ ಎಂದರು.
ಇದೇ ವೇಳೆ ವಿವಿಧ ಇಲಾಖೆಗಳು ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಸ್ಟಾಲ್ ಗಳನ್ನು ಹಾಕಲಾಗಿತ್ತು. ನಂತರ ಪಟ್ಟಣದ ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಮುದ್ದುಮಲ್ಲಯ್ಯ, ಸಣ್ಣಕುಮಾರ್, ಸಣ್ಣರಾಮಪ್ಪ, ಶಿವರಾಜು, ಅಶೋಕ್, ಶಿವಯ್ಯ, ಜೀವಿಕಾ ಬಸವರಾಜು, ಆಶಾ, ಶಶಿಕಲಾ, ದೆವಮ್ಮ, ಚಿಕ್ಕಣ್ಣ, ರಾಮಪ್ರಸಾದ್, ಕೃಷ್ಣಯ್ಯ, ರಾಜಣ್ಣ, ಶಿವಪ್ಪ ಶೆಟ್ಟಿ, ವೇಣು, ಸಿದ್ದರಾಮು, ಸಿದ್ದಪ್ಪಾಜಿ, ಕುಮಾರ್, ವೆಂಕಟೇಶ್, ಶಂಭು, ಎಂ.ಡಿ. ಮಂಚಯ್ಯ, ಮಹೇಶ್, ಬಸವರಾಜು, ನಾಗರಾಜು, ರಾಮಸ್ವಾಮಿ ನಾಗರಾಜು, ಬೋರಯ್ಯ,ಉಮೇಶ್, ರಾಮೇಗೌಡ, ಜಗನ್ನಾಥ್, ಸುರೇಶ್, ಶಿವರಾಜು, ರಾಜು, ಕನ್ನಡಪ್ರಮೋದ್, ಸುದರ್ಶನ್ ಇದ್ದರು.
ವರದಿ: ಮಲಾರ ಮಹದೇವಸ್ವಾಮಿ