ತುಮಕೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೀತಿದೆ. ಎನ್ ಐಎ ಟೀಂ ನಿಂದ ತನಿಖೆ ನಡಿತಿದೆ. ತನಿಖೆ ಬಗ್ಗೆ ಅನೇಕ ವಿಚಾರವನ್ನ ನಮಗೆ ತಿಳಿಸಿಲ್ಲ. ಅಪರಾಧಿಗಳನ್ನ ಪತ್ತೆ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನ ವಿಚಾರಣೆ ವಿಚಾರದಲ್ಲಿ ಆರೋಪಿಗೆ ಯಾರೆಲ್ಲ ಸಂಪರ್ಕದಲ್ಲಿದ್ರು ಅವರನ್ನೆಲ್ಲ ವಿಚಾರಣೆ ಮಾಡ್ತಿದ್ದಾರೆ ಎಂದರು.
ಮುದ್ದಹನುಮೇಗೌಡ ಸೋಲು ಗೆಲುವಿನ ಕ್ರೆಡಿಟ್ ಕಾಂಗ್ರೆಸ್ ಗೆ ಸೇರಿದ್ದು. ಐದು ಟ್ರಿಲಿಯನ್ ಎಕಾನಮಿ ಯಾರಿಗೆ ಮಾಡುತ್ತಿದ್ದಾರೆ. 10 ಫ್ಯಾಮಿಲಿಗಳಿಗೆ ಅನುಕೂಲ ಮಾಡಿಕೊಡಲು ಮಾಡುತ್ತಿದ್ದೀರಾ. ಐದು ಟ್ರಿಲಿಯನ್ ಎಕಾನಮಿ ಪಾಲುದಾರಿಕೆ ನಿಮಗೂ ಸಿಗುವಂತಾಗಬೇಕು ಎಂದರು.
ಸಮೃದ್ಧಿಯಾಗಿ ದೇಶ ನಡೆಸುತ್ತೇವೆ. ಮಾಧುಸ್ವಾಮಿ ಕಾಂಗ್ರೆಸ್ ಗೆ ಬಂದ್ರೆ ನಾನೇ ಸ್ವಾಗತ ಮಾಡುತ್ತೇನೆ. ಮುದ್ದಹನುಮೇಗೌಡರು ಭೇಟಿ ಮಾಡಿದ್ದಾರೆ. ಸಂದರ್ಭ ಬಂದಾಗ ಭೇಟಿ ಮಾಡ್ತೀವಿ ಎಂದರು. ಪ್ರತಿ ಚುನಾವಣೆಯಲ್ಲೂ ಸರ್ವೆ ಮಾಡಲಾಗುತ್ತದೆ. ಒಂದು ಹಂತಕ್ಕೆ ಮತದಾನ ಪೂರ್ವ ಸರ್ವೇಗಳನ್ನ ಗೌರವಿಸುತ್ತೇವೆ ಎಂದರು.
ನನಗೆ ಬೆನಿಫಿಟ್ ಆಯ್ತಾ, ಏನಾಯ್ತಾ ಅಂತ ಕೇಳುತ್ತಾನೆ. ಪ್ರತಿಯೊಬ್ಬ ಮತದಾರನೂ ನನಗೇನು ಆಗಿದೆ ಅಂತ ಯೋಚ್ನೆ ಮಾಡ್ತಾರೆ ಎಂದರು. ಫಲಿತಾಂಶ ನಮ್ಮ ಪರವಾಗಿ ಇರಲಿದೆ. 300 ಸ್ಥಾನಗಳು ಎನ್ ಡಿಎ ಒಕ್ಕೂಟಕ್ಕೆ ಬರಲ್ಲ ಎಂದರು.
ಏಪ್ರಿಲ್ 14 ಕ್ಕೆ ಸಿಎಂ, ಡಿಸಿಎಂ ಇಬ್ಬರು ಕೆಬಿ ಕ್ರಾಸ್ ಗೆ ಬರಲಿದ್ದಾರೆ. ಕೆ.ಬಿ. ಕ್ರಾಸ್ ನಲ್ಲಿ ಸಮಾವೇಶ ನಡೆಯುತ್ತದೆ. ಇಂಡಿಯಾ ಒಕ್ಕೂಟದ ಪ್ರಧಾನ ಮಂತ್ರಿಯನ್ನು ಚುನಾವಣೆ ಬಳಿಕ ಘೋಷಣೆ ಮಾಡುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296