ಪಾವಗಡ: ಪಟ್ಟಣದ ಇತಿಹಾಸ ಪ್ರಸಿದ್ದ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜನಾರ್ಧನ ಸ್ವಾಮಿರವರು ಮಂಗಳವಾರ 1 ಗಂಟೆಯಲ್ಲಿ ವಿಶೇಷ ನವಗ್ರಹ ಹಾಗೂ ಶೀತಲಾಂಭ ದೇವಿಗೆ ಕುಂಕುಮ ಅರ್ಚನೆ ಪೂಜೆಯನ್ನು ನೆರವೇರಿಸಿ. ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷ ಈ ಬಾರಿ ನನಗೆ ಅವಕಾಶ ಕೊಟ್ಟರೆ ಸ್ವರ್ಧೆಗೆ ನಾನು ಸಿದ್ದ, 3ನೇ ಭಾರಿಗೆ ನರೇಂದ್ರ ಮೋದಿಜಿಗೆ ಪ್ರಧಾನ ಮಂತ್ರಿ ಮಾಡುವುದು ನಮಗೆ ನಾವೇ ಒಳ್ಳೇದು ಮಾಡಿಕೊಂಡ ಹಾಗೇ, ಕೇಂದ್ರ ಸರ್ಕಾರ ಜನಪರ ಯೋಜನೆಗಳ ಮೂಲಕ ದೇಶದ ಗ್ರಾಮೀಣ ಜನರ ಮನ್ನಣೆಯನ್ನು ಗಳಿಸಿಕೊಂಡಿದೆ.
ಕಳೆದ 10 ವರ್ಷದಲ್ಲಿ ದೇಶದ ಘನತೆ, ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿದ್ದು, ಭಾರತ ದೇಶವು ಅನ್ಯ ರಾಷ್ಟ್ರಗಳ ಜೊತೆಗೆ ಪರಸ್ಪರ ಉತ್ತಮ ಬಾಂಧವ್ಯ ಹೊಂದಿ ಅತ್ಯುತ್ತಮ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಿಕೊಂಡು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯ ಸಾಲಿನಲ್ಲಿ ಅತ್ಯುತ್ತಮ ರಾಷ್ಟ್ರವಾಗಿ ಪರಿಣಮಿಸಿದೆ ಎಂದರೆ ಒಬ್ಬ ನರೇಂದ್ರ ಮೋದಿ ಜೀ ನೇರಕಾರಣೀ ಭೂತರಾಗಿರುತ್ತಾರೆ ಎಂದರು.
ಅತ್ಯಂತ ಹಿಂದುಳಿದ ಪ್ರದೇಶ ವಾಗಿರುವ ಬಯಲುಸೀಮೆ ತಾಲೂಕುಗಳಿಗೆ ಹಲವು ದಶಕಗಳ ಹಿಂದೆಯೇ ಅತ್ಯುತ್ತಮ ಭದ್ರಾ ಮೇಲ್ದಂಡೆ ಯೋಜನೆಯು ರಾಜಕಾರಣ ಮಾತುಗಳಿಗೆ ಸೀಮಿತವಾಗಿರುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಈ ಕ್ಷೇತ್ರದ ಲೋಕಸಭಾ ಸದಸ್ಯನ ನನ್ನ ಅವಧಿಯಲ್ಲಿ ಪ್ರಚಾರ ಸಭೆಯಲ್ಲಿ ಪ್ರಸ್ತಾಪಿಸಲಾಗಿ ತಕ್ಷಣವೇ ಲಕ್ಷಾಂತರ ಕೋಟಿ ರೂ.ಗಳನ್ನು ಮಂಜೂರು ಮಾಡಿ ಆದೇಶಿಸಿ ಯೋಜನಾ ಚಾಲನೆಯನ್ನು ನೀಡಿದರು ಅಂದಿನ ಯೋಜನಾ ವ್ಯವಸ್ಥೆಯಲ್ಲಿ ಹೊಳಲ್ಕೆರೆ ಮೊಳಕಾಲ್ಮೂರು ಪಾವಗಡ ತಾಲೂಕುಗಳನ್ನು ಕೈ ಬಿಟ್ಟಿದ್ದು ಕಂಡು, ಸರ್ಕಾರ ಮಟ್ಟದಲ್ಲಿ ಭದ್ರಾ ಮೇಲ್ದಂಡೆಯ ಯೋಜನಾಪರ ವಿಧಿ ವಿಧಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸಂಬಂಧಪಟ್ಟ ಪ್ರತಿಯೊಬ್ಬ ಸರಕಾರದ ಮುಖ್ಯ ಇಂಜಿನೀಯರುಗಳ ಸಭೆ ಕರೆಸಿ ಬಯಲು ಸೀಮೆಯ ತಾಲೂಕುಗಳನ್ನು ಆ ಬೃಹತ್ ಯೋಜನೆಗೆ ಸೇರಿಸಿ 200 ಕಿ.ಮೀ. ದೂರದಿಂದ ಪೈಪ್ ಲೈನ್ ಮೂಲಕ ನೀರು ಹರಿಸಲು, ಬೃಹತ್ ಕೈಗಾರಿಕೆ, ಭಾರತ ವೈಜ್ಞಾನಿಕ ಯುನಿವರ್ಸಿಟಿ, ಇಸ್ರೋ ಉಪಗ್ರಹಗಳ ತಯಾರಿಕೆ, ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಇಡೀ ದೇಶದ ರಕ್ಷಣೆಗೆ ಕೇಂದ್ರೀಯ ವಿದ್ಯಾ ಸಂಸ್ಥೆಗಳನ್ನು ಈ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವಲ್ಲಿ ಕಂಕಣಬದ್ಧನಾಗಿ ಕೆಲಸ ನಿರ್ವಹಿಸುತ್ತೇನೆ ಆದ್ದರಿಂದ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ ಬೆಳೆಬಾಳುವ ಮತ ಕೊಟ್ಟು ದೇಶ ಕಟ್ಟುವ ಯೋಚನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪುರುಷೋತ್ತಮರೆಡ್ಡಿ, ಸೂರ್ಯನಾರಾಯಣ, ಗೋವಿಂದಪ್ಪ, ಚಂದ್ರ ನಾಯಕ್, ಶ್ರೀರಾಮಗುಪ್ತ, ನಾಗರಾಜ್, ಬಂಡೆಪ್ಪ, ತಿಪ್ಪೇಸ್ವಾಮಿ, ಬ್ಯಾಡನೂರು ಶಿವು,ಮಹಿಳಾ ಮುಖಂಡರಾದ ಶಾರದ ಕೃಷ್ಣ ನಾಯಕ್, ಸರೋಜಮ್ಮ, ಶಾಂತಮ್ಮ ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


