ಔರಾದ್: ಪಟ್ಟಣದ ವಾರ್ಡ್ ನಂಬರ್ 92 ರಲ್ಲಿ ಜನತಾ ಕಾಲೋನಿಯಲ್ಲಿ, ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾ ಸಹ ಸಂಚಾಲಕರಾದ ಸುಧಾಕರ್ ಕೊಳ್ಳುರ ರವರ ನೇತೃತ್ವದಲ್ಲಿ, ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿಸಲಾಯಿತು ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಾಗರ್ ಈಶ್ವರ್ ಖಂಡ್ರೆ ಅವರ ಪರ ಮತಯಾಚನೆ ಮಾಡಿದರು.
ನಂತರ ಮಾತನಾಡಿದ ಸುಧಾಕರ್ ಕೊಳ್ಳುರ ರವರು, ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ಸರ್ಕಾರ ಬಂದ ತಕ್ಷಣ ಐದು ಗ್ಯಾರಂಟಿಗಳು ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ ಎಂದರು.
ಗ್ಯಾರಂಟಿಗಳಿಂದ ಜನರು ಬದುಕು ಸಾಗಿಸಲು ತುಂಬಾನೇ ಅನುಕೂಲವಾಗಿದೆ. ಅದೇ ತರ ಈ ಬಾರಿ ಕೂಡ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ತಕ್ಷಣ ಐದು ನ್ಯಾಯಗಳ ಜೊತೆ 25 ಗ್ಯಾರಂಟಿಗಳು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಹಾಗೂ ಪಾಲುದಾರಿಕೆ ನ್ಯಾಯಗಳು ಎಂಬ ಐದು ನ್ಯಾಯಗಳ ಘೋಷಣೆ ಆಗಿದೆ. ಈ ಐದು ನ್ಯಾಯಗಳಿಂದ 25 ಗ್ಯಾರಂಟಿಗಳ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆ.
ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ ಈಶ್ವರ್ ಖಂಡ್ರೆ ಅವರಿಗೆ, ಮತದಾನ ಮಾಡುವ ಮೂಲಕ ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮತದಾರ ಪ್ರಭುಗಳಲ್ಲಿ ಸುಧಾಕರ್ ಕೊಳ್ಳುರ ರವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೈಜಿನಾಥ ವಡೆಯರ, ಬಾಬುರಾವ ದರಬಾರೆ,ಅಶೋಕ ದರಬಾರೆ, ಯುವ ಕಾಂಗ್ರೆಸ್ ನಗರ ಅಧ್ಯಕ್ಷರಾದ ಶಂಕು ನಿಷ್ಪತೆ, ಇಸ್ಮಾಯಿಲ್, ಮೈಬೂಬ್, ಸಂಜು ಚಲವಾ, ಶಿವಾಜಿ, ಸಂಜು ರಾಠೋಡ, ರಂಜಾನ್ ಸಾಬ್, ಮುಂತಾದರೂ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


