ತುರುವೇಕೆರೆ:ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ತುರುವೇಕೆರೆ 2023– 24ನೇ ಸಾಲಿನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಡೆಯಿತು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಯೋಜಿತ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದ ಅಧ್ಯಕ್ಷೆ ಗೀತಾ ಸುರೇಶ್ ನಂತರ ಮಾತನಾಡಿದ ಅವರು, ನಮ್ಮ ಸದಸ್ಯರುಗಳು ಬೇರೆ ಕ್ಲಬ್ ಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋದಾಗ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಹಾಗೂ ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಬೆಳಕು ಚೆಲ್ಲಲು ಸಹಾಯವಾಗುತ್ತದೆ ಹಾಗೂ ಸಮುದಾಯದ ಸೇವೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಇಂದಿನ ಎಲ್ಲಾ ಪದಾಧಿಕಾರಿಗಳು ನನ್ನ ಹೆಗಲಿಗೆ ಹೆಗಲು ಕೊಟ್ಟು ಜೊತೆಯಲ್ಲಿ ಹೆಚ್ಚಿನದಾಗಿ ತುಂಬಾ ಸಹಾಯ ಮಾಡಿದ್ದೀರಿ ನಾನು ನಿಮಗೆ ತುಂಬಾ ಚಿರಋಣಿಯಾಗಿದ್ದೇನೆ. ಕೆಲವು ಯೋಜನೆಗಳಲ್ಲಿ ಕೆಲಸ ಮಾಡುವಾಗ ಎಲ್ಲರೂ ತುಂಬಾ ಸಹಾಯ ಮಾಡಿರುತ್ತೀರ ಅದರಲ್ಲಿ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯಿಂದ ಹಿಡಿದು ಶಾಲೆಗಳಿಗೆ ಪೀಠೋಪಕರಣಗಳನ್ನು ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವಂತಹ ಸೇವೆಗಳಲ್ಲಿ ನೀವು ಸಹ ಕೈಜೋಡಿಸಿದ್ದೀರಿ ನಾನು ಒಬ್ಬರು ನಮ್ಮ ಕ್ಲಬ್ ವತಿಯಿಂದ ಆಯೋಜನೆ ಮಾಡಿದ ಕಣ್ಣಿನ ಚಿಕಿತ್ಸೆಯ ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಯಶಸ್ವಿಯಾಗಿ ಚಿಕಿತ್ಸೆ ಪಡೆದು ಬಂದ ನಂತರ ನನ್ನ ಹತ್ತಿರ ಬಂದು ಮಾತನಾಡಿ ಹರಸಿದರು, ಅದೇನೆಂದರೆ “ಅವ್ವ ನೀನು ಬೆಳಕು ನೀಡಿರುವೆ, ನನ್ನ ಕೈಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹಣವಿರಲಿಲ್ಲ. ಎಲ್ಲರನ್ನೂ ಪರಿಪರಿಯಾಗಿ ಕೇಳಿಕೊಂಡರು ಸಹ ಸಾಧ್ಯವಾಗಿರಲಿಲ್ಲ, ನೀನು ನನಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಟ್ಟಿರುವೆ ನೀನು ತಣ್ಣಗೆ ಇರು ಎಂದು ಹಾರೈಸಿದರು ಅದರಿಂದ ನನ್ನ ವಯಸ್ಸು ಇನ್ನು ಹೆಚ್ಚಿಗೆ ಆಯಿತು ಎಂದು ಅನಿಸಿತು ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಲತಾ ಪ್ರಸನ್ನರವರು ಅಧಿಕಾರವಹಿಸಿಕೊಂಡು ಮಾತನಾಡಿ, ಈ ನಮ್ಮ ಇನ್ನರ್ವೇಲ್ ಸಂಸ್ಥೆ ಅಂತರಾಷ್ಟ್ರೀಯ ಸಂಸ್ಥೆಯಾಗಿತ್ತು. ನೂರು ವರ್ಷಗಳನ್ನು ಪೂರೈಸಿದ ಸಂಸ್ಥೆಯಾಗಿದ್ದು ನಾವು ಸೇವೆ ಮಾಡುವ ಸಂಕಲ್ಪ ಮಾಡಿಕೊಂಡು ಬರುತ್ತಿದೆ ಇದು ನಮಗೆಲ್ಲರಿಗೂ ಸಂತೋಷದ ವಿಷಯವೇನೆಂದರೆ ಮೂರನೇ ವರ್ಷದಲ್ಲಿ ನಾನು ಅಧ್ಯಕ್ಷ ಆಗುತ್ತಿರುವುದು ತುಂಬಾ ಹೆಮ್ಮೆಯ ವಿಚಾರ. ನಮ್ಮ ಜಿಲ್ಲೆಯ ಅಧ್ಯಕ್ಷರಾದ ರೇಖಾ ಪ್ರಸಾದ್ ನಮ್ಮ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮಗೆಲ್ಲರೂ ಹೆಮ್ಮೆಯಾಗಿದೆ ಈ ಸಂಸ್ಥೆ ಪ್ರಾರಂಭವಾಗಿ ಒಂದು ವರ್ಷ ಆಗಿದೆ ಆದರೂ ಸಹ ಅವಿಸ್ಮರಣಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ, ಇನ್ನೂ ಮುಂದೆಯೂ ಸಹ ನನ್ನ ಅಧಿಕಾರ ಅವಧಿಗಳಲ್ಲಿ ಸೇವ ಕಾರ್ಯಗಳನ್ನು ಮಾಡಲು ನಾನು ಉತ್ಸವವಾಗಿದ್ದೇನೆ ನೀವುಗಳು ಸಹ ನನಗೆ ಜೊತೆಯಾಗಿದ್ದು ಸಹಕರಿಸುತ್ತೀರಾ ಎಂದು ಭಾವಿಸಿದ್ದೇನೆ. ನಮ್ಮ ತಾಲೂಕಿನ ಗಡಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಂಕಲ್ಪ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ಸಮಾರಂಭದಲ್ಲಿ 23 24ನೇ ಸಾಲಿನ ಪದಾಧಿಕಾರಿಗಳು ಅದರಲ್ಲಿ ಅಧ್ಯಕ್ಷರಾಗಿ ಲತಾ ಪ್ರಸನ್ನ ಕುಮಾರ್, ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾ ಅನಿಲ್, ಖಜಾಂಚಿಯಾಗಿ ಶ್ರೀಮತಿ ರೇಖಾ ಮೂಡಲಗಿರಿ, ಸಂಚಿಕೆ ಸಂಪಾದಕರಾಗಿ ಆನಂದ ಜಲ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ನೇತ್ರ ಸಿಲ್ಲಿಂಗ್ ಸ್ವಾಮಿ ಹಾಗೂ ಸ್ವಪ್ನ ನಟೇಶ್, ಸಹ ಕಾರ್ಯದರ್ಶಿ ಶ್ರೀಮತಿ ತ್ರಿವೇಣಿ ಮಲ್ಲಿಕಾರ್ಜುನ್ ರವರುಗಳು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸದಸ್ಯರುಗಳು ಪದಾಧಿಕಾರಿಗಳು ಹಾಗೂ ರೋಟರಿ ಕ್ಲಬ್ ಸದಸ್ಯರುಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA