ತುಮಕೂರು: ತುಮಕೂರು ತಾಲ್ಲೂಕು ಕಸಬಾ ಪೂರ್ವ ಹೋಬಳಿ ಬೆಳಗುಂಬ ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರ ಮಹಾಸ್ವಾಮಿಯವರ ನೂತನ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಕಾರ್ಯಕ್ರಮವು ನವೆಂಬರ್ 8ರಂದು ಜರುಗಲಿದೆ ಎಂದು ತಹಶೀಲ್ದಾರ್ ರಾಜೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವಾಲಯ ಉದ್ಘಾಟನಾ ಕಾರ್ಯಕ್ರಮವನ್ನು ನವೆಂಬರ್ 8ರ ಶುಕ್ರವಾರ ಸಂಜೆ 4.30 ಗಂಟೆಗೆ ಶುಭ ಗೋಧೂಳಿ ಸಮಯದಲ್ಲಿ ಗಂಗಾಪೂಜೆ, ಮಹಾಗಣಪತಿಪೂಜೆ ಮೂಲಕ ಪ್ರಾರಂಭಿಸಲಾಗುವುದು. ನಂತರ ಸಂಜೆ 6 ಗಂಟೆಗೆ ಬೆಳ್ಳಾವಿ ಕಾರದೇಶ್ವರಮಠ ಶ್ರೀಶ್ರೀಶ್ರೀ ಕಾರದ ವೀರಬಸವ ಮಹಾಸ್ವಾಮಿ ದಿವ್ಯಸಾನಿಧ್ಯದಲ್ಲಿ ಧ್ವಜಾರೋಹಣ ಹಾಗೂ ದೇವಾಲಯ ಲೋಕಾರ್ಪಣೆಗೊಳ್ಳಲಿದೆ.
ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಅಂಗವಾಗಿ ನವೆಂಬರ್ 11ರವರೆಗೂ ಅಭಿಷೇಕ, ಹೋಮ, ಪೂರ್ಣಫಲ ಸಮರ್ಪಣೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಕಡೆಯ ದಿನ ನವೆಂಬರ್ 11ರ ಬೆಳಿಗ್ಗೆ 11 ಗಂಟೆಗೆ ಪೂಜಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜರುಗಲಿದೆ. ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಲಶ ಸ್ಥಾಪನಾ ಅಂಗವಾಗಿ ನವೆಂಬರ್ 8 ರಿಂದ 11ರವರೆಗೆ ಪ್ರತಿ ದಿನ ದಾಸೋಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q