ಹರ್ಯಾಣ: ಹರ್ಯಾಣದಲ್ಲಿ ಮಹತ್ವದ ದ್ವಾರಕಾ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈಗ ದ್ವಾರಕಾ ಎಕ್ಸ್ ಪ್ರೆಸ್ ವೇ ಎಲ್ಲಿ ನಿರ್ಮಾಣವಾಗಿದೆಯೋ ಆ ಜಾಗವನ್ನು ಕೆಲ ವರ್ಷಗಳ ಹಿಂದೆ ಅಸುರಕ್ಷಿತ ಸ್ಥಳ ಎಂದು ಹೇಳಲಾಗುತ್ತಿತ್ತು. ಜನ ಇಲ್ಲಿಗೆ ಬರಲು ಹೆದರುತ್ತಿದ್ದರು. ಆದರೆ ಅಂತಹ ಜಾಗದಲ್ಲಿ ಸುರಕ್ಷಿತವಾದ, ಉತ್ತಮ ಗುಣಮಟ್ಟದ ಎಕ್ಸ್ ಪ್ರೆಸ್ ವೇ ನಿರ್ಮಾಣ ಮಾಡಲಾಗಿದೆ. ಇದು ಈಗ ಎನ್ ಸಿಆರ್ ನ ತ್ವರಿತ ಅಭಿವೃದ್ಧಿ ಕಾಣುತ್ತಿರುವ ಪ್ರದೇಶವಾಗಿದೆ ಎಂದು ಪ್ರಧಾನಿ ಹೇಳಿದರು.
ಹಿಂದಿನ ಸರ್ಕಾರ ಸಣ್ಣ ಸಣ್ಣ ಯೋಜನೆಗಳನ್ನು ಜಾರಿಗೆ ತಂದು 5 ವರ್ಷಗಳ ಕಾಲ ಅದನ್ನೇ ಹೇಳುತ್ತಾ ಸಮಯ ಕಳೆದಿದೆ. ಆದರೆ ಬಿಜೆಪಿ ಹಾಗಲ್ಲ. 2024 ಆರಂಭವಾಗಿ 10 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ , ಉದ್ಘಾಟಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದೇಶದ ಕೋಟ್ಯಾಂತರ ಜನರನ್ನು ಒಗ್ಗೂಡಿಸಿಲಾಗುತ್ತಿದೆ, ಮೊದಲು ದೆಹಲಿಯಲ್ಲಿ ಮಾತ್ರ ಜನರನ್ನು ಸೇರಿಸಲಾಗುತ್ತಿತ್ತು ಎಂದರು. ಇನ್ನು ಎಕ್ಸ್ ಪ್ರೆಸ್ ವೇ ಬಗ್ಗೆ ಮಾತನಾಡುತ್ತಾ, ‘ ಈ ಯೋಜನೆಯನ್ನು ಜನರಿಗೆ ಒಪ್ಪಿಸಿದ್ದು ನನಗೆ ಖುಷಿ ತಂದಿದೆ, 9 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ದ್ವಾರಕಾ ಎಕ್ಸ್ ಪ್ರೆಸ್ ವೇ ದೆಹಲಿ ಮತ್ತು ಹರ್ಯಾಣ ನಡುವಿನ ಸಂಚಾರ ದಟ್ಟಣೆಯನ್ನು ಬದಲಿಸಲಿದೆ, ಇಲ್ಲಿನ ಜನರ ಬದುಕನ್ನು ಸರಾಗವಾಗಿಸಲಿದೆ ಎಂದು ಹೇಳಿದರು.
2047 ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ, ನನಗೆ ಸಣ್ಣದಾಗಿ ಯೋಚಿಸಲು ಬರುವುದಿಲ್ಲ , ಸಣ್ಣದಾಗಿ ಕನಸು ಕಾಣಲೂ ಬರುವುದಿಲ್ಲ, ನನಗೆ ದೊಡ್ಡ ಮಟ್ಟದ ಯೋಜನೆಗಳು ಬೇಕು, ಅಭಿವೃದ್ಧಿ ವಿಚಾರ ನನ್ನ ಆದ್ಯತೆ, 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದು ಮೋದಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


