ಕಠ್ಮಂಡು: ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ಸುಬ್ರತಾ ಘೋಷ್(45) ಮೃತಪಟ್ಟ ಪರ್ವತಾರೋಹಿಯಾಗಿದ್ದಾರೆ.
ಇವರು 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿದರು. ಬಳಿಕ ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದ್ದು, ಹಿಲರಿ ಸ್ಟೆಪ್ಸ್ ಬಳಿ ಅವರು ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಮಾಹಿತಿ ನೀಡಿದ್ದಾರೆ.
ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್ ರಿಂದ ಇಳಿಯಲು ಸಾಧ್ಯವಾಗಲಿಲ್ಲ. ಆ ಬಳಿಕ ಮಾರ್ಗದರ್ಶಿ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂ ಪ್ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW