ಭಾರತೀಯ ಹ್ಯಾಕರ್ ಗಳು ಇಸ್ರೇಲ್ ಗೆ ಬೆಂಬಲವನ್ನು ನೀಡಿದ್ದು, ಪ್ಯಾಲೆಸ್ತೀನ್ ಮತ್ತು ಹಮಾಸ್ ಗೆ ಸೇರಿದ ಪ್ರಮುಖ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಲಾಗಿದೆ.
‘ಇಂಡಿಯನ್ ಸೈಬರ್ ಫೋರ್ಸ್’ ಎಂಬ ಭಾರತೀಯ ಹ್ಯಾಕರ್ ತಂಡವು ಪ್ಯಾಲೆಸ್ತೀನ್ ಸರ್ಕಾರದ ಅಧಿಕೃತ ವೆಬ್‌ಸೈಟ್ ಗಳು ಮತ್ತು ಹಮಾಸ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದೆ.
ಪ್ಯಾಲೇಸ್ಟಿನಿಯನ್ ವೆಬ್‌ಮೇಲ್ ಸರ್ಕಾರಿ ಸೇವೆ, ನ್ಯಾಷನಲ್ ಬ್ಯಾಂಕ್ ವೆಬ್‌ಸೈಟ್, ಟೆಲಿ ಕಮ್ಯುನಿಕೇಷನ್ ಮತ್ತು ಹಮಾಸ್ ಅಧಿಕೃತ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಲಾಗಿದೆ.


