ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ ಸಿಂಗಾಪುರವನ್ನು 13-0 ಅಂತರದಿಂದ ಸೋಲಿಸಿದೆ. ಭಾರತ ಪರ ಸಂಗೀತಾ ಕುಮಾರಿ 3 ಗೋಲು ಗಳಿಸಿದರು. ಸಿಂಗಾಪುರಕ್ಕೆ ಸತತ ಎರಡನೇ ಸೋಲು ಸಂಭವಿಸಿದೆ.
ಭಾರತ ಮಹಿಳಾ ಹಾಕಿ ತಂಡ ತನ್ನ ಅಭಿಯಾನಕ್ಕೆ ಶುಭಾರಂಭ ಮಾಡಿದೆ. ಮಲೇಷ್ಯಾ, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಸಿಂಗಾಪುರದೊಂದಿಗೆ ಭಾರತ ತಂಡ ಪೂಲ್-ಎಯಲ್ಲಿ ಸ್ಥಾನ ಪಡೆದಿದೆ.
ಈ ಪೂಲ್ ನ ಮೊದಲ ಪಂದ್ಯದಲ್ಲಿ ಮಲೇಷ್ಯಾ 8-0 ಗೋಲುಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿತು. ಆದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ 4-0 ಗೋಲುಗಳಿಂದ ಸಿಂಗಾಪುರವನ್ನು ಸೋಲಿಸಿತು. ಇದೀಗ ಭಾರತ ತಂಡ ಸಿಂಗಾಪುರವನ್ನು 13-0 ಅಂತರದಿಂದ ಸೋಲಿಸಿದೆ. ಈ ಮೂಲಕ ಸಿಂಗಾಪುರ ತಂಡ ಸತತ 2ನೇ ಪಂದ್ಯದಲ್ಲಿಯೂ ಕೂಡ ಸೋಲನ್ನು ಕಂಡಿದೆ.
ಸವಿತಾ ಪುನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಲಿದೆ ಎಂದು ಭಾರತೀಯ ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.