ಅಸ್ಸಾಂ: ಭಾರತದ ಅತ್ಯಂತ ಹಿರಿಯ ಸಾಕಾನೆ 89 ವರ್ಷದ ‘ಬಿಜುಲಿ ಪ್ರಸಾದ್’ ಇಂದು ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಸಾವನ್ನಪ್ಪಿದೆ.
ವಯೋಸಹಜ ಸಮಸ್ಯೆಗಳಿಂದ ಬಳಲುತಿದ್ದ ಆನೆ ಇಂದು ಮುಂಜಾನೆ 3.30ರ ಹೊತ್ತಿಗೆ ‘ದಿ ವಿಲಿಯಮ್ಸನ್ ಮಾಗೊರ್ ಗ್ರೂಪ್’ ಕಂಪನಿಗೆ ಸೇರಿದ ಬೆಹಾಲಿ ಟೀ ಎಸ್ಟೇಟ್‌ನಲ್ಲಿ ಕೊನೆಯುಸಿರೆಳೆದಿದೆ ಎಂದು ಎಸ್ಟೇಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಸಣ್ಣ ಮರಿಯಿದ್ದಾಗ ಬಿಜುಲಿ ಪ್ರಸಾದ್‌ನನ್ನು ಬಾರ್‌ಗಾಂಗ್ ಟೀ ಎಸ್ಟೇಟ್‌ಗೆ ಕರೆತರಲಾಗಿತ್ತು. ಬಾರ್‌ಗಾಂಗ್ ಟೀ ಎಸ್ಟೇಟ್ ಮಾರಾಟಮಾಡಿದ ನಂತರ ಆನೆಯನ್ನು ಬೆಹಾಲಿ ಟೀ ಎಸ್ಟೇಟ್‌ಗೆ ತರಲಾಯಿತು. ಆನೆಯು ಇಡೀ ಎಸ್ಟೇಟ್‌ನ ಹೆಮ್ಮೆಯ ಸಂಕೇತದಂತಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


