ಮನುಷ್ಯನ ಆಸೆಗೆ ಕೊನೆಯೇ ಇಲ್ಲ, ಅದರಲ್ಲಿ ಸಾಕಷ್ಟು ಆಸೆಗಳು ಚಟವಾಗಿ ಮಾರ್ಪಡುವುದು ಹೆಚ್ಚು. ಆ ಪೈಕಿ ಮದ್ಯಪಾನ, ಧೂಮಪಾನ ಪ್ರಮುಖವಾದದ್ದು, ಮದ್ಯಪಾನ, ಧೂಮಪಾನ ಮಾಡುವುದರಿಂದ ಪುರುಷರಲ್ಲಿ ಬಂಜೆತನ ಸೃಷ್ಟಿಯಾಗುವ ಸಾಧ್ಯತೆ ಇದೆ.
ಮದ್ಯಪಾನ ಒಂದೆರಡು ಪೆಗ್ ನಂತೆ ಮಿತಿಯಲ್ಲಿ ಇದ್ದರೆ, ಯಾವುದೇ ಹಾನಿ ಇರುವುದಿಲ್ಲ. ಆದರೆ, ಅದಕ್ಕೂ ಹೆಚ್ಚಿನ ಚಟ ಹೊಂದಿರುವವರ ಸಂತಾನ ಭಾಗ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಂತೆ.
2015ರಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ, ಅತೀಯಾದ ಮದ್ಯಪಾನ ಮಾಡುವುದರಿಂದ ವೀರ್ಯಾಣುಗಳು ನಾಶವಾಗಿ ಪುರುಷರಲ್ಲಿ ಬಂಜೆತನ ಸೃಷ್ಟಿಯಾಗುವ ಶೇ.35ರಷ್ಟು ಸಾಧ್ಯತೆಗಳಿವೆ ಎಂದು ಸಿಡಿಸಿ ಹೇಳಿದೆ.
ಮದ್ಯಪಾನ ಮಾಡುವುದರಿಂದ ಹಾರ್ಮೋನುಗಳ ಸಂಖ್ಯೆ ಕಡಿಮೆಯಾಗುವುದು, ಇದಲ್ಲದೇ ಫಾಲಿಕಲ್ ಉತ್ಪತ್ತಿ ಮಾಡುವ ಹಾರ್ಮೋನುಗಳು ಕೂಡ ಕಡಿಮೆಯಾಗುವುದು. ಇದರಿಂದಾಗಿ ವೀರ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ.
ಅತೀಯಾದ ಮದ್ಯಪಾನದಿಂದ ಪುರುಷರ ಜನನಾಂಗದ ಗಾತ್ರ ಕೂಡ ಕುಗ್ಗುತ್ತದೆ. ಇದರಿಂದಾಗಿ ಶೀಘ್ರಸ್ಖಲನ ಉಂಟಾಗುತ್ತದೆ. ಮದ್ಯಪಾನದ ಜೊತೆಗೆ ಗಾಂಜಾ, ಧೂಮಪಾನದಿಂದಲೂ ವೀರ್ಯಾಣುಗಳು ಕಡಿಮೆಯಾಗುತ್ತದೆ. ಸಣ್ಣ ವಯಸ್ಸಿನಿಂದಲೇ ಕುಡಿತದ ಚಟಕ್ಕೆ ಸಿಲುಕಿದವರಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತದೆ.
ಮದ್ಯಪಾನದಿಂದ ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರ ಸಂತಾನೋತ್ಪತಿ ಕ್ರಿಯೆಗೂ ತೊಂದರೆಯಾಗುತ್ತದೆ. ಅಂಡೋತ್ಪತ್ತಿ ಬಿಡುಗಡೆಯ ಮೇಲೆ ಮದ್ಯಪಾನ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಗರ್ಭಧಾರಣೆಯನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಹೇಳಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1