ತುಮಕೂರು: ಮಣ್ಣು ಸಂರಕ್ಷಣೆ ಮತ್ತು ಸುಸ್ಥಿರ ಪರಿಸರಕ್ಕಾಗಿ ಹೋರಾಟ ಮಾಡಿದ ಊರ್ಡಿಗೆರೆಯ ಲಕ್ಷ್ಮೀಶ್ ಹಾಗೂ ಕದರನಹಳ್ಳಿ ಗೊಲ್ಲರಹಟ್ಟಿಯ ಭೈರಲಿಂಗಯ್ಯ ಅವರನ್ನು ಗುರುತಿಸಿ ‘ಇನಿಶಿಯೇಟಿವ್ ಫಾರ್ ಸಸ್ಟೇನಬಲ್ ಅಗ್ರಿಕಲ್ಚರ್ ಅಂಡ್ ಎನ್ವಿರಾನ್ಮೆಂಟ್ – ಚಾಂಪಿಯನ್ ಆಫ್ ಸಾಯಿಲ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ರಮೇಶ್ ನಾಯಕ್ ಎಲ್. ಅವರ ನೇತೃತ್ವದಲ್ಲಿ ಪ್ರಸಕ್ತ ವರ್ಷದಿಂದ ಆರಂಭಗೊಂಡ ಪ್ರಶಸ್ತಿ ಪ್ರದಾನವು ಕಾರ್ಯಕ್ರಮವು ಮುಂದೆ ಪ್ರತೀ ವರ್ಷವೂ ನಡೆಸಲು ತೀರ್ಮಾನಿಸಲಾಗಿದೆ. ಪ್ರಶಸ್ತಿಯು ಸ್ಮರಣಿಕೆ, 10 ಸಾವಿರ ರೂ ನಗದು ಒಳಗೊಂಡಿದೆ.
ಶ್ರೀ ಸಿದ್ಧಗಂಗಾ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಶ್ರೀ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ಹೈಕೋರ್ಟ್ ಸರಕಾರಿ ವಕೀಲ ಹರೀಶ್ ಎ.ಎಸ್., ವಕೀಲ ಹಾಲೇಶ ಎ.ಎಸ್., ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಎ.ನಾರಾಯಣಸ್ವಾಮಿ, ಪ್ರಾಧ್ಯಾಪಕ ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.