ತುಮಕೂರು : ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಉಪ್ಪಾರಪಾಳ್ಯ ಮಜರೆ ಗ್ರಾಮದ ಜನರ ಜೀವನ ಕೆಲವು ಕಾಣದ ಕೈಗಳ ಪ್ರಭಾವದಿಂದ ಮತ್ತು ಗ್ರಾಮದ ಶ್ರೀನಿವಾಸ್ ಎಂಬಾತನಿಂದ ನಿರಂತರವಾಗಿ ಊರು ಬಿಡುವಂತೆ ದೌರ್ಜನ್ಯ ಎಸಗುತ್ತಿರುವುದು ಬೆಳಕಿಗೆ ಬಂದಿದೆ.
ಸುಮಾರು 80 ವರ್ಷಗಳಿಂದ ನೂರಾರು ಜನ ಉಪ್ಪಾರಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ವಾಸವಾಗಿದ್ದು ಗ್ರಾಮದ ಜನರಿಗೆ ನಿವೇಶನ ಹಕ್ಕುಪತ್ರ ಅಂದಿನ ಕಾಲದಲ್ಲಿ ಸರ್ಕಾರ ನೀಡಿದೆ ಖಾತೆ ಕಂದಾಯವನ್ನು ಅಂದಿನಿಂದಲೂ ಇಂದಿನವರೆಗೂ ಜನ ಕಟ್ಟಿಕೊಂಡು ಸರ್ಕಾರಿ ಸೌಲಭ್ಯವನ್ನು ಪಡೆದಿದ್ದಾರೆ ಅಲ್ಲದೇ ಗ್ರಾಮದಲ್ಲಿ ಸಪ್ಪಲಮ್ಮ ದೇವಿಯ ದೇವಾಲಯವಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಮಿನಿ ಅಂಗನವಾಡಿ ಕೇಂದ್ರವು ಇದೆ ಸುಮಾರು 70ಕ್ಕೂ ಹೆಚ್ಚು ಮನೆಗಳಿದ್ದು 400ಕ್ಕೂ ಅಧಿಕ ಜನರಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಸೌಲಭ್ಯ, ಸಿಸಿ ರಸ್ತೆ,ಚರಂಡಿ, ವಿದ್ಯುತ್ ದೀಪ ಇನ್ನಿತರೆ ಮೂಲ ಸೌಲಭ್ಯಗಳನ್ನು ಪಡೆದಿರುವ ಗ್ರಾಮವಾಗಿದೆ. ಗ್ರಾಮದ ಜನರ ಹೆಸರಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಮನೆಗಳ ಮತ್ತು ನಿವೇಶನಗಳ ಖಾತೆಯನ್ನು ಪಡೆದಿದ್ದಾರೆ ಮತ್ತು ಈ ಸ್ವತ್ತು ಸಹ ಪಡೆದಿದ್ದಾರೆ.
ಸರ್ಕಾರವು ಬಡವರಿಗೆ ದೀನ ದಲಿತರಿಗೆ ನಿರ್ಗತಿಕರಿಗೆ ಬಡವರಿಗೆಂದು ವಿಶೇಷ ಯೋಜನೆಯನ್ನು ರೂಪಿಸಿ ಗ್ರಾಮದಲ್ಲಿ ವಾಸವಾಗಿದ್ದ ಜನರಿಗೆ ಹಕ್ಕುಪತ್ರ ಮತ್ತು ನಿವೇಶನವನ್ನು ನೀಡಿತ್ತು.. ಅದರಂತೆ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಸವಲತ್ತುಗಳನ್ನು ಪಡೆದು ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ.
ಕಳೆದ 2022-23ರಲ್ಲಿ ಉಪ್ಪಾರ್ ಪಾಳ್ಯ ಗ್ರಾಮದ ಗ್ರಾಮಸ್ಥರು ವಾಸವಾಗಿರುವ ಗ್ರಾಮದ ಸರ್ವೇ ನಂಬರ್ 34/2 ರನ್ನು ಶ್ರೀನಿವಾಸ್ ಆರ್ ಬಿನ್ ರಾಮಯ್ಯ ಎಂಬ ಖಾಸಗಿ ವ್ಯಕ್ತಿ ಅಕ್ರಮವಾಗಿ ತನ್ನ ಹೆಸರಿಗೆ ಕ್ರಯ ಮಾಡಿಕೊಂಡು ಗ್ರಾಮಸ್ಥರಿಗೆ ಊರು ಬಿಡುವಂತೆ ಧಮ್ಕಿ ಹಾಕಿ ದೌರ್ಜನ್ಯ ಮಾಡುತ್ತಿದ್ದಾನೆಂದು ಆರೋಪ ಕೇಳಿ ಬಂದಿದೆ.
ಊರಿನ ಗ್ರಾಮಸ್ಥರು ಮಧುಗಿರಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯ ಕೊಡಬೇಕೆಂದು ಮನವಿರುವ ಘಟನೆ ನಡೆದಿದೆ.
ಇನ್ನಾದರೂ ಮಧುಗಿರಿ ತಹಶಿಲ್ದಾರ್ ತಕ್ಷಣವೇ ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರು ಮತ್ತು ಕರ್ನಾಟಕ ರಣಧೀರರ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುವುದೆಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಆರ್.ಶಂಕರ್ ಗೌಡ್ರು ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296