ತುಮಕೂರು: ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿಗೆ ಕಾಳಜಿ ಪೌಂಡೇಶನ್ ತಂಡದೊಂದಿಗೆ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು ಇದರ ಎಚ್.ಎಂ.ವೆಂಕಟೇಶ್ ಹಾಗೂ ಲಂಚ ಮುಕ್ತ ನಿರ್ಮಾಣ ವೇದಿಕೆ ರಾಜ್ಯ ಕಾರ್ಯದರ್ಶಿಗಳು ಆದ ನರಸಿಂಹ ಮೂರ್ತಿ.ಎನ್. ಬೆಂಗಳೂರು, ತಂಡ ದಿಢೀರ್ ಭೇಟಿ ನೀಡಿದರು.
ಇದೇ ವೇಳೆ ಮಾತನಾಡಿದ ನೈಜ್ಯ ಹೋರಾಟಗಾರರ ವೇದಿಕೆ ಹೆಚ್. ಎಂ. ವೆಂಕಟೇಶ್, ಇದು ಸರ್ಕಾರದ ಕಾಲೇಜು ಅಂತ ಹೇಳಲು ನಾಚಿಕೆ ಆಗುತ್ತಿದೆ. ಪ್ರಾಂಶುಪಾಲರು ತುಂಬಾ ಆ್ಯಕ್ಟಿವ್ ಇದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಪದವಿ ಪಡೆದು ಉತ್ತಮ ಉದ್ಯೋಗದಲ್ಲಿದ್ದಾರೆ. ಆದ್ರೆ, ಈ ಕಾಲೇಜಿನ ಬಗ್ಗೆ ಸರ್ಕಾರ ಯಾಕೆ ಇಷ್ಟೊಂದು ಅಸಡ್ಡೆಯಿಂದ ವರ್ತಿಸುತ್ತಿದೆ ಎನ್ನುವ ಬಗ್ಗೆ ನಮಗೆ ಆಶ್ಚರ್ಯವಾಗುತ್ತಿದೆ ಎಂದರು.
ಈ ಕಾಲೇಜು ಜೂನಿಯರ್ ಕಾಲೇಜಿನ ಪ್ರಾಂಗಣದಲ್ಲಿದೆ. ಆದರೆ ಆ ಕಾಲೇಜಿನ ಪ್ರಿನ್ಸಿಪಲ್ ಯಾವುದಕ್ಕೂ ಕೋಪರೇಟ್ ಮಾಡಲ್ಲ. ಕಾಲೇಜಿನೊಳಗಡೆ ಯಾವುದೇ ರೀತಿಯ ಮೂಲಭೂತ ಸೌಕರ್ಯವಿಲ್ಲ, ಇದರೊಳಗೆ ಹೋಗಿ ಬಂದಾಗ ಹಸುವನ್ನು ಸಾಕುವ ಕೊಟ್ಟಿಗೆಯ ಒಳಗೆ ಹೋದಂತಹ ಅನುಭವವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂತಹ ವ್ಯವಸ್ಥೆ ಕಂಡಾಗ ನನಗೆ ನಿಜವಾಗಿಯೂ ಬಹಳ ಬೇಸರವಾಯಿತು. ಮುಂದೆ ಚಿತ್ರಕಲೆಯಲ್ಲೇ ಸಾಧನೆ ಮಾಡಬೇಕು ಅಂತ ಯುವ ಪೀಳಿಗೆ ಇದೆಯೋ ಅವರಿಗೂ ಈ ಕಾಲೇಜನ್ನು ನೋಡಿದಾಗ ಬಹಳ ಹಿನ್ನಡೆಯಾಗುತ್ತದೆ. ಈ ಕಾಲೇಜಿಗೆ ಯಾಕಪ್ಪ ನಾನು ಸೇರಬೇಕು ಅನ್ನಿಸಬಹುದು. ಆದರೆ ಈ ಕಾಲೇಜಿಗೆ ಸೇರಿರುವ ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಕೆಲಸ ಮಾಡಿ ಚಿತ್ರಕಲೆಯಲ್ಲಿ ಬಹಳ ಮುಂದೆ ಬಂದಿದ್ದಾರೆ ಎನ್ನುವುದು ಸಂತೋಷದ ವಿಷಯ ಎಂದು ಅವರು ಹೇಳಿದರು.
ಈ ಕಾಲೇಜಿನ ಪರವಾಗಿ ಕಾಳಜಿ ಪೌಂಡೇಷನ್ ಕೆಲಸ ಮಾಡುತ್ತಿದೆ. ಇವರು ಹೇಳುವ ಪ್ರಕಾರ, ಈ ಕಾಲೇಜಿನ ಪ್ರಾಂಶುಪಾಲರು, ಅತಿಥಿ ಉಪನ್ಯಾಸಕರು ಕಾಲೇಜು ತೆರೆಯುವುದಕ್ಕೂ ಮುನ್ನ ಕಸ ಗುಡಿಸಿ, ನೆಲ ಒರೆಸಿ ಎಲ್ಲ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಎದುರು ನಾವು ಇಂತಹ ಕೆಲಸ ಮಾಡಬಾರದು ಅಂತ, ಕಾಲೇಜು ಆರಂಭವಾಗುವುದಕ್ಕೂ ಮೊದಲೇ ಬಂದು ಶಿಕ್ಷಕರೇ ಕೆಲಸ ಮಾಡುತ್ತಿದ್ದಾರೆ. ಇಲ್ಲೊಬ್ಬರು ಅಟೆಂಡರ್ ಕೂಡ ಇಲ್ಲ, ಒಬ್ಬರು ಪ್ರಿನ್ಸಿಪಾಲ್ 5 ಜನ ಅತಿಥಿ ಉಪನ್ಯಾಸಕರು ಇದ್ದಾರೆ ಎಂದು ಅವರು ಹೇಳಿದರು.
ಸರ್ಕಾರ ಈ ಕಾಲೇಜನ್ನು ಐಸಿಯುನಲ್ಲಿ ಇಟ್ಟ ರೀತಿಯಲ್ಲಿ ಇಟ್ಟಿದೆ. ಅತ್ತ ಕಾಲೇಜು ಇದೆ ಅಂತನೂ ಇಲ್ಲ, ಇತ್ತ ಕಾಲೇಜು ಇಲ್ಲ ಎಂದೂ ಇಲ್ಲದಂತಿದೆ ಎಂದರು.
ಉನ್ನತ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ತಕ್ಷಣ ಕಾರ್ಯಪ್ರವೃತ್ತರಾಗಿ ಕಾಲೇಜಿಗೆ ಮೂಲಭೂತ ಸೌಕರ್ಯ ಕೊಡಬೇಕು. ಇಲ್ಲಿನ ವಿದ್ಯಾರ್ಥಿನಿಯರು ಮುಕ್ಕಾಲು ಕಿ.ಮೀ.ನಷ್ಟು ದೂರ ಹೋಗಿ ಬಾತ್ ರೂಮ್ ಗೆ ಹೋಗಬೇಕಿದೆ. ಇಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ವಾಶ್ ರೂಮ್ ಗಳು ಕೂಡ ಇಲ್ಲ. ಆದ್ರೆ ಸರ್ಕಾರ ಇಲ್ಲಿ ಎಲ್ಲವೂ ಇದೆ ಅಂತ ತಿಳಿದುಕೊಂಡಿದೆ ಎಂದು ಅವರು ಹೇಳಿದರು.
ಇನ್ನು ಮುಂದಾದರೂ ಕೂಡ ಈ ಕಾಲೇಜನ್ನು ಉನ್ನತೀಕರಣ ಗೊಳಿಸಲು ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ, ಸಚಿವರು ಯೋಚಿಸಿ ಏನೇನು ಬೇಕು ಅದನ್ನು ಒದಗಿಸಿ ಕೊಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296