ತುರುವೇಕೆರೆ : ಇತಿಹಾಸ ಪ್ರಸಿದ್ಧ ತುರುವೇಕೆರೆ ಪಟ್ಟಣದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಶ್ರೀ ಸತ್ಯ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಾಗೂ ಸಮಿತಿಯ ಪದಾಧಿಕಾರಿಗಳೊಂದಿಗೆ ಮತ್ತು ಮತ್ತು ಭಕ್ತಾದಿಗಳೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡರು
ಶಿಲ್ಪಿಗಳಾದ ದೇವರಾಜ್ ರವರ ಗೃಹದಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಗಣಪತಿ ಆಸ್ಥಾನ ಮಂಟಪಕ್ಕೆ
ಗಣಪತಿ ಮೂರ್ತಿ ಆಗಮನ ಗಣಪತಿ ಮೂರ್ತಿಗೆ ಸೇವಾ ಸಮಿತಿ ಹಾಗೂ ಭಕ್ತಾದಿಗಳು ಮಾಡಿಸಿರುವ ನಾಲ್ಕು ಕೆಜಿ ರಜತ ಕಿರೀಟ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ರಜತ ಕಿರೀಟವನ್ನು ಶಿಲ್ಪಿ ದೇವರಾಜ್ ಹಾಗು ಶ್ರೀ ಸತ್ಯ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ರವರು ಗಣಪತಿ ಮೂರ್ತಿಗೆ ಧಾರಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ರಾಜ್ ಅರಸ್ ಹಾಗೂ ಇತರೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ