ಹಾಸನ: ಸೆಪ್ಟೆಂಬರ್ 15ರಂದು ಕರ್ನಾಟಕದ ಘನ ಸರ್ಕಾರವು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಮಾನವ ಸರಪಳಿಯನ್ನು ನಿರ್ಮಿಸಿ, ಪ್ರಜಾಪ್ರಭುತ್ವದ ಮಹತ್ವವನ್ನು ಸಾರಲು ಕರೆ ನೀಡಲಾಗಿದೆ ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಸೆಪ್ಟೆಂಬರ್ 15ರ ಭಾನುವಾರದಂದು ಬೆಳಗ್ಗೆ 8:30ರಿಂದ 9:30ರ ತನಕ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಅರಕಲಗೂಡು ತಾಲೂಕಿನ ಕಡೂರುಹೊಸಳ್ಳಿ ಗ್ರಾಮದಿಂದ ಈ ಸರಪಳಿ ಆರಂಭಗೊಳ್ಳಲಿದ್ದು, ಹಗರೆ, ಬೇಲೂರು, ಕೈಮರ ಚೆಕ್ ಪೋಸ್ಟ್, ಚಿಕ್ಕಮಗಳೂರು ಗಡಿ ಮೂಲಕ ಸುಮಾರು 114 ಕಿಲೋಮೀಟರ್ಗಳಷ್ಟು ಐತಿಹಾಸಿಕ ಮಾನವ ಸರಪಳಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಮಹತ್ವದ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸಿ, ಮಾನವ ಸರಪಳಿಯ ಭಾಗವಾಗೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


