ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 21 ರಿಂದ 24 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗೆ 1 ವರ್ಷದ ಇಂಟರ್ನ್ಶಿಪ್ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ತರಬೇತಿ ಪಡೆಯಲಿಚ್ಛಿಸುವವರು ಮಾರ್ಚ್ 31ರೊಳಗಾಗಿ www.pminternship.mca.gov.in ಪೋರ್ಟಲ್ನಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ./ ಐಟಿಐ/ ದ್ವಿತೀಯ ಪಿಯುಸಿ/ ಬಿಎ/ ಬಿಎಸ್ಸಿ/ ಬಿ.ಕಾಂ/ ಬಿಸಿಎ/ ಬಿಬಿಎ/ಬಿ–ಫಾರ್ಮ ವಿದ್ಯಾರ್ಹತೆ ಹೊಂದಿರುವವರು ತರಬೇತಿಗೆ ಅರ್ಹರಿರುತ್ತಾರೆ. ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 1.25ಲಕ್ಷ ರೂ.ಗಳ ಮಿತಿಯೊಳಗಿರಬೇಕು. ಕುಟುಂಬ ಸದಸ್ಯರಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ/ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರಬಾರದು.
ತರಬೇತಿ ಅವಧಿಯಲ್ಲಿ ಮಾಸಿಕ 5,000 ರೂ.ಗಳ ಕಲಿಕಾ ವೇತನ ನೀಡಲಾಗುವುದು. ಇಂಟರ್ನ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ 6,000 ರೂ.ಗಳನ್ನು ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯ ಮಾಡಿ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು. ಉದ್ಯೋಗಾವಕಾಶ ಕಲ್ಪಿಸಿಕೊಳ್ಳಲು ಈ ತರಬೇತಿ ಉಪಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4