nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯಕ್ಕೆ ಜೋಶಿ, ಕುಮಾರಸ್ವಾಮಿ ಕೊಡುಗೆ ಏನು?: ಬಹಿರಂಗ ಚರ್ಚೆಗೆ ಪ್ರದೀಪ್ ಈಶ್ವರ್ ಸವಾಲು

    June 19, 2025

    `ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ: ಸುಪ್ರೀಂ ಕೋರ್ಟ್ ತರಾಟೆ

    June 19, 2025

    ಮೆಟ್ರೋ ನಿಲ್ದಾಣದ ಮಳಿಗೆ ಹಂಚಿಕೆಯಲ್ಲಿ ಯಾವುದೇ ಪಕ್ಷಪಾತವಿಲ್ಲ: BMRCL ಸ್ಪಷ್ಟನೆ

    June 19, 2025
    Facebook Twitter Instagram
    ಟ್ರೆಂಡಿಂಗ್
    • ರಾಜ್ಯಕ್ಕೆ ಜೋಶಿ, ಕುಮಾರಸ್ವಾಮಿ ಕೊಡುಗೆ ಏನು?: ಬಹಿರಂಗ ಚರ್ಚೆಗೆ ಪ್ರದೀಪ್ ಈಶ್ವರ್ ಸವಾಲು
    • `ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ: ಸುಪ್ರೀಂ ಕೋರ್ಟ್ ತರಾಟೆ
    • ಮೆಟ್ರೋ ನಿಲ್ದಾಣದ ಮಳಿಗೆ ಹಂಚಿಕೆಯಲ್ಲಿ ಯಾವುದೇ ಪಕ್ಷಪಾತವಿಲ್ಲ: BMRCL ಸ್ಪಷ್ಟನೆ
    • ಶೌಚಗುಂಡಿ ಗುಂಡಿಯಲ್ಲಿ ಪತ್ತೆಯಾಯ್ತು ಮಾನವನ ಅಸ್ಥಿಪಂಜರ!
    • ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ
    • ಹಿಟ್ಲರ್ ರಾಜಕಾರಣ ಮಾಡಬೇಡಿ, ನಿಮ್ಮ ದರ್ಪಕ್ಕೆ, ಧಮ್ಕಿಗೆ ಯಾರು ಹೆದರುವುದಿಲ್ಲ: ಸಚಿವ ಕೆ.ಎನ್.ರಾಜಣ್ಣ ವಿರುದ್ಧ  ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
    • ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ
    • “ಸಮಯೋಚಿತ ಕುಡಿಯುವ ನೀರು ಉಳಿಸಬಲ್ಲದು ಹಲವು ಮೂಕ ಪ್ರಾಣಿಗಳ ಜೀವ”
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇರಕಸಂದ್ರದಲ್ಲಿ ಸ್ಮಶಾನ ಇಲ್ಲದೇ ಕಲ್ಲಿನಿಂದ ಮುಚ್ಚಿ ಶವ ಸಂಸ್ಕಾರ: ಗ್ರಾಮಸ್ಥರ ಆಕ್ರೋಶ
    ಕೊರಟಗೆರೆ December 21, 2022

    ಇರಕಸಂದ್ರದಲ್ಲಿ ಸ್ಮಶಾನ ಇಲ್ಲದೇ ಕಲ್ಲಿನಿಂದ ಮುಚ್ಚಿ ಶವ ಸಂಸ್ಕಾರ: ಗ್ರಾಮಸ್ಥರ ಆಕ್ರೋಶ

    By adminDecember 21, 2022No Comments2 Mins Read
    smashana

    ಕೊರಟಗೆರೆ: ಪಟ್ಟಣದ ತಾಲ್ಲೂಕಿನ ಇರಕಸಂದ್ರ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ಮಶಾನವೇ ಮರೀಚಿಕೆ ಆಗಿದ್ದು ಶವ ಸಂಸ್ಕಾರ ಮಾಡಲು ಜಾಗಕ್ಕೆ ಬಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.

    ಇನ್ನೂ ಬೆಟ್ಟಗುಡ್ಡದಲ್ಲಿ ಶವವನ್ನು ಕಲ್ಲಿನಿಂದ ಮುಚ್ಚುವ ದುಸ್ಥಿತಿ ಎದುರಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.


    Provided by

    ಸ್ಮಶಾನಕ್ಕಾಗಿ ಗ್ರಾಮ ಪಂಚಾಯಿತಿ ಮುಂದೆ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದು, ಸಂಬಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

    ಕೆರೆಯ ಅಂಗಳವೇ ಶವ ಸಂಸ್ಕಾರ ಮಾಡುವ ಜಾಗವಾಗಿದ್ದು, ಕೆರೆಯಲ್ಲಿ ನೀರು ತುಂಬಿದರೆ, ಬೆಟ್ಟಗುಡ್ಡವೇ ಗತಿ ಎಂಬಂತಾಗಿದೆ ಇಲ್ಲಿನ ನಿವಾಸಿಗಳ ಕಥೆ.

    • ಇರಕಸಂದ್ರ ಕಾಲೋನಿಯಲ್ಲಿ ಯಾರೇ ಸತ್ತರೂ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ.
    • 300ಕ್ಕೂ ಅಧಿಕ ಕುಟುಂಬಗಳೂ ವಾಸವಿರುವ ಗ್ರಾಮ.
    • ಗ್ರಾಮದ ಅರ್ಧ ಜನರಿಗೆ ಸ್ವಂತ ಜಮೀನು ಸಹ ಇಲ್ಲ.
    • ಕೆರೆಯ ಅಂಗಳ, ಬೆಟ್ಟ ಗುಡ್ಡ, ರಾಜ್ಯ ಹೆದ್ದಾರಿ, ಹಳೆ ಚರಂಡಿ ಮತ್ತು ಅರಣ್ಯ ಪ್ರದೇಶದ ಸ್ಮಶಾನ ಜಾಗ.

    ಕೊರಟಗೆರೆ ಆಡಳಿತ ಮತ್ತು ರಾಜಕೀಯ ಧುರೀಣರು ಚುನಾವಣೆಗೆ ಮಾತ್ರ ಸಿಮೀತವಾದ ಪರಿಣಾಮ 75 ವರ್ಷಗಳಿಂದ ಸ್ಮಶಾನವೇ ಮರೀಚಿಕೆ.

    ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಇರಕಸಂದ್ರ ಕಾಲೋನಿ ಮತ್ತು ನೀಲಗೊಂಡನಹಳ್ಳಿ ಗ್ರಾಮದಲ್ಲಿ 300 ಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಯಾರೇ ಸತ್ತರೂ ಕೆರೆಯ ಅಂಗಳದಲ್ಲೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಜಮೀನು ಮತ್ತು ಮನೆಯೇ ಇಲ್ಲದಿರುವ ಬಡ ಜನರು ಸತ್ತಾಗ ಸ್ಮಶಾನದ ಜಾಗಕ್ಕಾಗಿಯು ಪ್ರತಿಭಟನೆ ಮಾಡುವ ದುಸ್ಥಿತಿ ಕೊರಟಗೆರೆಯಲ್ಲಿ ನಿರ್ಮಾಣವಾಗಿದೆ.

    ಸ್ಮಶಾನದ ಜಾಗ ಗುರುತಿಸಲು ಕಂದಾಯ ಅಧಿಕಾರಿ ಮತ್ತು ಗ್ರಾಪಂ ಪಿಡಿಓ ನಿರ್ಲಕ್ಷವೇಕೆ? ಗ್ರಾಪಂ ಸದಸ್ಯರು, ತಾಪಂ ಮತ್ತು ಜಿಪಂ ಸದಸ್ಯರ ಪಾತ್ರವೇನು? ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಈ ವಿಚಾರ ತಿಳಿದಿಲ್ಲವೇ? ಮೃತಪಟ್ಟ ಮಹಿಳೆಯ ಶವ ಹೂಳಲು 6/3 ಅಡಿ ಜಾಗವನ್ನೇ ನೀಡದಂತಹ ಕೊರಟಗೆರೆ ಆಡಳಿತಕ್ಕೆ ಇರಕಸಂದ್ರ ಗ್ರಾಮಸ್ಥರು ಹಿಡಿಶಾಪ ಹಾಕಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇರಕಸಂದ್ರ ಕಾಲೋನಿಯ ಲೇ.ಗಂಗಯ್ಯನ ಮಡದಿ ವೆಂಕಟಮ್ಮ (81) ಡಿ.18ರ ಭಾನುವಾರ ಸಂಜೆ ಮೃತ ಪಟ್ಟಿದ್ದಾರೆ. ಲೇ.ಗಂಗಯ್ಯ ಮೃತಪಟ್ಟಾಗಲು ಸ್ಮಶಾನ ಇಲ್ಲದೇ ಕೆರೆಯ ಅಂಗಳದಲ್ಲೇ ಶವ ಸಂಸ್ಕಾರ ನಡೆಸಲಾಗಿದೆ. ಪ್ರಸ್ತುತ ಸ್ಮಶಾನದ ಜಾಗಕ್ಕಾಗಿ ಮೃತ ಮಹಿಳೆಯ ಶವದೊಂದಿಗೆ ಗ್ರಾಮಸ್ಥರು ಸೇರಿ ನೀಲಗೊಂಡನಹಳ್ಳಿ ಗ್ರಾಪಂಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

     ಕೆರೆಯ ಅಂಗಳವೇ ಸ್ಮಶಾನದ ಜಾಗ:

    ಐ.ಕೆ.ಕಾಲೋನಿ ಗ್ರಾಮದಲ್ಲಿ 300 ಮನೆಗಳಿದ್ದು 1,200ಕ್ಕೂ ಅಧಿಕ ಮತದಾರರು ಇದ್ದಾರೆ. ಕಳೆದ 50 ವರ್ಷದಿಂದ ಯಾರೇ ಸತ್ತರೂ ಇರಕಸಂದ್ರ ಕಾಲೋನಿಯ ಕೆರೆಯ ಅಂಗಳದಲ್ಲೇ ಶವಸಂಸ್ಕಾರ ನಡೆಸುತ್ತಾರೆ. ಪ್ರಸ್ತುತ ಕೆರೆಯಲ್ಲಿ ನೀರು ತುಂಬಿರುವ ಪರಿಣಾಮ ಕೆರೆಯ ಜಾಗವು ನೀರಿನಿಂದ ಭರ್ತಿಯಾಗಿದೆ. ಸ್ಮಶಾನಕ್ಕೆ ಜಾಗವಿಲ್ಲದೇ ಎರಡು ದಿನದಿಂದ ಬಡ ಕುಟುಂಬವು ಬೀದಿಯಲ್ಲಿ ಹೋರಾಟ ನಡೆಸುತ್ತೀದೆ.

    ಯಾರೇ ಮೃತಪಟ್ಟರೂ ಕುಟುಂಬಸ್ಥರು ಶವದ ಮುಂದೆ ಅಳುತ್ತಿಲ್ಲ. ಆರಡಿ/ಮೂರಡಿ ಜಾಗಕ್ಕಾಗಿ ಕಂಡೋರ ಮನೆಯ ಮುಂದೆ ಅಳುವುದೇ ಜಾಸ್ತಿ. 50 ವರ್ಷದಿಂದ ಕೆರೆಯ ಅಂಗಳವೇ ನಮ್ಮ ಗ್ರಾಮಕ್ಕೆ ಸ್ಮಶಾನ. ಕೊರಟಗೆರೆ ಆಡಳಿತ ಬೆಟ್ಟಗುಡ್ಡದಲ್ಲಿ ಈಗ ಸ್ಮಶಾನಕ್ಕೆ ಜಾಗ ಗುರುತಿಸಿದೆ. ನಮ್ಮೂರ ಬಡವರ ನೋವು ಕೇಳೊರು ಯಾರು ಇಲ್ಲದಾಗಿದೆ.

    – ಕೃಷ್ಣಮೂರ್ತಿ. ಗ್ರಾಪಂ ಸದಸ್ಯ. ಐ.ಕೆ.ಕಾಲೋನಿ

     

    ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ:

    ತಾಲೂಕು ಇಲಾಖೆ ವತಿಯಿಂದ ಈಗಾಗಲೇ ಸ್ಮಶಾನಕ್ಕಾಗಿ ಒಂದು ಎಕರೆ ಭೂಮಿಯನ್ನು ಗುರುತಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದರು ಸಹ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಭಿವೃದ್ಧಿ ಪಡಿಸದೆ ಅವರ ನಿರ್ಲಕ್ಷ್ಯದಿಂದ ಇಂತಹ ದುಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಮಶಾನಕ್ಕಾಗಿ ಗುರುತಿಸಿದ ಭೂಮಿಯ ಜಾಗವನ್ನು ಅಭಿವೃದ್ಧಿಪಡಿಸದೆ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ.

    ಈ ಘಟನೆಗೆ  ಸಂಬಂಧಿಸಿದಂತೆ ತಾಲೂಕು ಕಂದಾಯ ಇಲಾಖೆ ವತಿಯಿಂದ ಒಂದು ಎಕರೆ ಭೂಮಿಯನ್ನು ಗುರುತಿಸಿ ಅದಕ್ಕೆ ಸಂಬಂಧ ಪಟ್ಟ ದಾಖಲಾತಿ ಪ್ರತಿಗಳನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸುವುದು ಕಾಣಬಹುದು..

    ವರದಿ: ಮಂಜುಸ್ವಾಮಿ ಎಂ ಎನ್.ಕೊರಟಗೆರೆ.


     

    admin
    • Website

    Related Posts

    ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ

    June 19, 2025

    ಆಟೋ ವ್ಹೀಲಿಂಗ್ ಮಾಡುತ್ತಿದ್ದ ಚಾಲಕನ ಬಂಧನ: ಆಟೋ ವಶ

    June 18, 2025

    ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ

    June 16, 2025
    Our Picks

    `ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ: ಸುಪ್ರೀಂ ಕೋರ್ಟ್ ತರಾಟೆ

    June 19, 2025

    ಸಾಲ ಮರುಪಾವತಿಸಲಿಲ್ಲ ಎಂದು ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ!

    June 17, 2025

    ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!

    June 16, 2025

    ಸೇತುವೆ ಕುಸಿದು 6 ಮಂದಿ ಪ್ರವಾಸಿಗರು ಸಾವು

    June 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯಕ್ಕೆ ಜೋಶಿ, ಕುಮಾರಸ್ವಾಮಿ ಕೊಡುಗೆ ಏನು?: ಬಹಿರಂಗ ಚರ್ಚೆಗೆ ಪ್ರದೀಪ್ ಈಶ್ವರ್ ಸವಾಲು

    June 19, 2025

    ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿಯವರಿಂದ ರಾಜ್ಯಕ್ಕೆ ಕೊಡುಗೆ ಏನು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್…

    `ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ: ಸುಪ್ರೀಂ ಕೋರ್ಟ್ ತರಾಟೆ

    June 19, 2025

    ಮೆಟ್ರೋ ನಿಲ್ದಾಣದ ಮಳಿಗೆ ಹಂಚಿಕೆಯಲ್ಲಿ ಯಾವುದೇ ಪಕ್ಷಪಾತವಿಲ್ಲ: BMRCL ಸ್ಪಷ್ಟನೆ

    June 19, 2025

    ಶೌಚಗುಂಡಿ ಗುಂಡಿಯಲ್ಲಿ ಪತ್ತೆಯಾಯ್ತು ಮಾನವನ ಅಸ್ಥಿಪಂಜರ!

    June 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.