ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಜನ್ 10 ಮುಗಿದು ಅನೇಕ ತಿಂಗಳು ಕಳೆದರೂ ಸಹ ಈ ಸೀಜನ್ ನ ಸ್ಪರ್ಧಿಗಳು ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಪೈಕಿ ವರ್ತೂರ್ ಸಂತೋಷ್ ಹಾಗೂ ಬೆಂಕಿ ಖ್ಯಾತಿಯ ತನಿಷಾ ಕುಪ್ಪಂಡ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತಿದೆ.
ವರ್ತೂರ್ ಸಂತೋಷ್ ಹಾಗೂ ತನಿಷಾ ಯಾವಾಗಲೂ ಜೊತೆಯಾಗಿ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದರು. ಈಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವ ಗುಸು ಗುಸು ಮಾತುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಹೀಗಾಗಿ ಬಗ್ಗೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಹಳ್ಳಿಕಾರ್ ವರ್ತೂರ್ ಸಂತೋಷ್ ನೇರವಾಗಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ನಿಮಗೂ ಬೆಂಕಿಗೂ ಲವ್ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ವರ್ತೂರ್ ಸಂತೋಷ್, ನಮ್ಮ ನಡುವೆ ಒಳ್ಳೆ ಗೆಳೆತನ ಇದೆ. ನನಗೆ ಬೆಂಕಿ ಒಳ್ಳೆ ಫ್ರೆಂಡ್. ಹೇಗೆ ಅಂದರೆ ಅವರ ಶೋ ಮುಗಿದಿದ್ದರೂ ನಾನು ಬರುವವರೆಗೂ ಕಾದಿದ್ದರು. ಅದರಲ್ಲೇ ಗೊತ್ತಾಗುತ್ತದೆ ಅವರು ನನಗೆ ಕೊಡುವ ಗೌರವ. ಹಾಗೂ ನಾನು ಅವರಿಗೆ ಕೊಡುವ ಗೌರವ ಗೊತ್ತಾಗುತ್ತದೆ ಎಂದರು.
ನಮ್ಮ ಇಬ್ಬರ ನಡುವೆ ಒಂದು ಒಳ್ಳೆ ಗೆಳೆತನ ಇದೆ. 100% ಒಳ್ಳೆ ಫ್ರೆಂಡ್‌ಶಿಪ್ ಇದೆ. ಒಳಗಡೆನೂ ಇತ್ತು. ಹೊರಗಡೆ ಬಂದ ಮೇಲೂ ಇದೆ. ಪೆಟ್ಟು ತಿಂದಿರುವ ಹಾವು ಮೊದಲಿನಿಂದ ನೇರವಾಗಿ ಹೋಗುವುದಿಲ್ಲ. ಬದಲಿಗೆ ತಲೆ ಎತ್ತಿ ನೋಡಿಕೊಂಡು ಹೋಗುತ್ತದೆ. ಯಾಕೆಂದರೆ ಅದು ಆಗಲೇ ಒಂದು ಬಾರಿ ಪೆಟ್ಟು ತಿಂದಿರುತ್ತದೆ. ಹೀಗಾಗಿ ಮುಂದೆ ನೋಡಿಕೊಂಡು ಹೋಗುತ್ತದೆ ಎಂದು ತಮ್ಮ ಜೀವನದಲ್ಲಿಯೂ ಹಾಗೇ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


