ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ ಬಳಿಕ ಸಿನಿಮಾ ಆಫರ್ ಗಳು ಬರುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಆ ಮಾತು ಇತ್ತೀಚೆಗೆ ಸುಳ್ಳಾಗುತ್ತಿದೆ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ ಧರ್ಮ ಕೀರ್ತಿರಾಜ್ ಹೇಳಿದ್ದಾರೆ.
ಕೆಲವರಿಗೆ ಒಂದೆರಡು ಆಫರ್ ಬಂದಿರಬಹುದು, ಆದರೆ ಸಾಬೀತು ಮಾಡಿಕೊಳ್ಳದೇ ಇದ್ದರೆ ಮತ್ತೆ ಆಫರ್ ಬರುವುದು ಅನುಮಾನ ಎಂದು ಅವರು ಹೇಳಿದ್ದಾರೆ.
ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಧರ್ಮ ಕೀರ್ತಿರಾಜ್ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕೂಡ ನೇರ ನುಡಿಗೆ ಧರ್ಮ ಕೀರ್ತಿರಾಜ್ ಹೆಸರು ಮಾಡಿದ್ದರು. ಏನೇ ಇದ್ದರೂ ನೇರವಾಗಿ ಮಾತನಾಡುವ ಧರ್ಮ ಕೀರ್ತಿರಾಜ್ ಗೆ ಇದು ಬಿಗ್ ಬಾಸ್ ಮನೆಯಲ್ಲಿ ಹಿನ್ನಡೆಗೆ ಕಾರಣವಾಗಿತ್ತು. ಅವರು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕವೂ ತಮ್ಮ ನೇರ ನಡೆ, ನುಡಿಗಳಿಂದಲೇ ಮುಂದೆ ಸಾಗ್ತಾ ಇದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4