ತುಮಕೂರು: ಸಮಾಜದಲ್ಲಿ ಬೆಳೆಯುತ್ತಿರುವ ಧರ್ಮ ದ್ವೇಷ, ಜಾತಿಪದ್ದತಿ, ಲಿಂಗ ಅಸಮಾನತೆ ಮತ್ತು ಅಸ್ಪೃಶ್ಯತೆಗಳನ್ನು ತೊಡೆದುಹಾಕಲು ಮಾನಸಿಕ ಮಾಲಿನ್ಯವನ್ನು ನಿವಾರಣೆ ಮಾಡಬೇಕೆಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ‘ಈ ದಿನ ಡಾಟ್ ಕಾಮ್’ ಆಯೋಜಿಸಿದ್ದ ‘ನಮ್ಮ ಕರ್ನಾಟಕ ನಡೆದು 50 ಹೆಜ್ಜೆ, ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಹಾಗೂ ನ್ಯೂಸ್ ಆಪ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬೀದಿಗಳು ಸ್ವಚ್ಛವಾಗುವುದು ಮಾತ್ರವಲ್ಲದೆ, ಭಾವ ಭಾರತೀಯತ್ವವೂ ಸ್ವಚ್ಛವಾಗಬೇಕಾಗಿದೆ. ಜನರ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಮನುಸ್ಮೃತಿ ಮತ್ತು ಬಂಡವಾಳಶಾಹಿಯ ಮಾಲಿನ್ಯವನ್ನು ನಿವಾರಿಸಬೇಕಾಗಿದೆ” ಎಂದು ಅವರು ಹೇಳಿದರು.
ಹಿರಿಯ ಸಾಮಾಜಿಕ ಚಿಂತಕ ಕೆ.ದೊರೈರಾಜ್ ಆಪ್ ಬಿಡುಗಡೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ವಹಿಸಿದ್ದರು.
ಪರಿಸರವಾದಿ ಸಿ.ಯತಿರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು, ಸಾಮಾಜಿಕ ಹೋರಾಟಗಾರ ಎ.ನರಸಿಂಹಮೂರ್ತಿ, ಎಐಟಿಯುಸಿ ಮುಖಂಡ ಗಿರೀಶ್ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx