ಸನಾತನ ಧರ್ಮದ ವಿರುದ್ಧ ಸದಾ ಕಿಡಿಕಾರುವ ಡಿಎಂಕೆ ನಾಯಕರಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ ಹೊರ ಬಿದ್ದಿದೆ. ಡಿಎಂಕೆ ಸಂಸದ ಎ. ರಾಜಾ ತಮ್ಮ ಭಾಷಣದಲ್ಲಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದು ತೀವ್ರ ಸಂಚಲನ ಸೃಷ್ಟಿಸಿದೆ.
ತಮಿಳುನಾಡಿನಲ್ಲಿ ನಡೆದಿರುವ ಡಿಎಂಕೆ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಎ.ರಾಜಾ ನಾವು ಶ್ರೀರಾಮನ ಶತ್ರುಗಳು. ನಾವು ಜೈ ಶ್ರೀರಾಮ ಘೋಷಣೆಯನ್ನು ಒಪ್ಪಲ್ಲ. ನಾವು ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಒಪ್ಪಲ್ಲ. ನಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ. ನಮ್ಮ ರಾಮ ಜಾತಿ, ಧರ್ಮ ನೋಡಲ್ಲ. ಬಿಜೆಪಿಯ ರಾಮ ಅಸಹ್ಯಕರ. ತಮಿಳುನಾಡು ಬಿಜೆಪಿಯ ಶ್ರೀರಾಮನನ್ನು ಒಪ್ಪಲ್ಲ. ನಾವು ಬಿಜೆಪಿಯವರ ಶ್ರೀರಾಮಚಂದ್ರನ ಶತ್ರುಗಳು. ನಾವು ಬಿಜೆಪಿಯವರ ರಾಮಾಯಣದಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳದವರು. ಮೂರ್ಖರಿಗೆ ಮಾತ್ರ ಜೈ ಶ್ರೀರಾಮ್ ಘೋಷಣೆ ಎಂದು ಎ. ರಾಜಾ ಟೀಕಿಸಿದ್ದಾರೆ.
ಭಾರತ ದೇಶವಲ್ಲ, ಭಾರತವು ಒಂದು ಉಪಖಂಡ. ತಮಿಳುನಾಡೇ ಒಂದು ದೇಶ. ಕೇರಳವೇ ಒಂದು ದೇಶ. ಒಡಿಶಾವೇ ಒಂದು ದೇಶ, ಒಂದು ನಾಡು. ಈ ಎಲ್ಲಾ ದೇಶಗಳು ಸೇರಿ ಇಂಡಿಯಾ ಆಗಿದೆ. ಹೀಗಾಗಿ ಇಂಡಿಯಾ ಉಪಖಂಡ ಎಂದು ಡಿಎಂಕೆ ಸಂಸದ ಎ. ರಾಜಾ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


