ಸರಗೂರು: ಜಮೀನು, ಆಸ್ತಿ ವಿಚಾರದ ವೈಷಮ್ಯಕ್ಕೆ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಹಾದನೂರು ಗ್ರಾಮದಲ್ಲಿ ನಡೆದಿದ್ದು, ಕಂಠಮಟ್ಟ ಕುಡಿದು ಬಂದ ತಂದೆ ಬೆಳೆದು ನಿಂತಿರುವ ತನ್ನ ಮಗನನ್ನು ನಿರ್ದಯವಾಗಿ ಹತ್ಯೆ ನಡೆಸಿದ್ದಾನೆ.
ಸರಗೂರು ತಾಲ್ಲೂಕಿನ ಹಾಸನೂರು ಗ್ರಾಮದ 30 ವರ್ಷ ವಯಸ್ಸಿನ ಸ್ವಾಮಿ ಹತ್ಯೆಗೀಡಾಗಿರುವ ಯುವಕನಾಗಿದ್ದು. 56 ವರ್ಷ ವಯಸ್ಸಿನ ಸಿದ್ದರಾಜು ತನ್ನ ಸ್ವಂತ ಮಗನನ್ನೇ ಕೊಂದ ಆರೋಪಿಯಾಗಿದ್ದಾನೆ. ಹತ್ಯೆಯ ಬಳಿಕ, ಜಮೀನು ಮತ್ತು ಆಸ್ತಿಯ ವಿಚಾರವಾಗಿ ತಾನೇ ಮಗನನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ರಾತ್ರಿ ವೇಳೆ ಮನೆಯಲ್ಲಿ ಸ್ವಾಮಿ ನಿದ್ರಿಸುತ್ತಿದ್ದು, ಯಾರೂ ಇಲ್ಲದ ವೇಳೆ ನೋಡಿಕೊಂಡು ತಂದೆ ಸಿದ್ದರಾಜು ಕಂಠಮಟ್ಟ ಕುಡಿದುಕೊಂಡು ಬಂದು ಮರದ ತುಂಡಿನಿಂದ ತನ್ನ ಮಗನ ತಲೆಗೆ ಹೊಡೆದ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಅಧಿಕಾರಿಗಳಾದ ರವಿಪ್ರತಾಪ್, ವೃತ್ತ ನೀರಿಕ್ಷಕ ಆನಂದ್ ಎನ್.ಪಿ., ಎಸ್ ಐ ಶ್ರಾವಣ ದಾಸ ರೆಡ್ಡಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700