ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಭರಮ ಸಾಗರ ಹೋಬಳಿಯ ಕೊಳಾಳು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಸಂತೋಷ್ ಹೆಚ್.ಎಸ್. ರವರು ಖಾತೆ ಬದಲಾವಣೆಗಾಗಿ ರೂ 4,500ರೂ., ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಭರಮಸಾಗರದ ನಾಡಕಛೇರಿಯಲ್ಲೆ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಆರೋಪಿ ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಹೆಚ್.ಎಸ್. ರವರನ್ನು ಬಂಧಿಸಿದ್ದಾರೆ.
ಆರೋಪಿ ಸಂತೋಷ್ ಹಳವುದರ ಗ್ರಾಮದ ರೈತ ವೀರೇಶ್ ಬಳಿ ರೂಪಾಯಿ 4,500 ಲಂಚ ಸ್ವೀಕರಿಸುವಾಗ ಎ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ . ಖಾತೆ ಬದಲಾವಣೆ ಮಾಢಿಕೊಡುವಂತೆ ಸಾಕಷ್ಟುಸಲ ರೈತ ಓಡಾಡಿದ್ದರೂ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಸಂತೋಷ್ ಹೆಚ್.ಎಸ್. ರವರು ಸ್ಪಂದಿಸದೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ರೈತ ಎಸಿಬಿ ಮೊರೆ ಹೋಗಿದ್ದರು.
ದಾವಣಗೆರೆ ಎಸಿಬಿ ಅಧಿಕಾರಿಗಳಾದ ಡಿ ವೈ ಎಸ್ ಪಿ ಮಂಜುನಾಥ್ ಆರ್. ,ಇನ್ಸ್ ಪೆಕ್ಟರ್ ಗಳಾದ ಉಮೇಶ್ ಕುಮಾರ್, ಪ್ರಭು ಸೂರಿನ್ ಅವರು ದಾಳಿಯ ನೇತೃತ್ವ ವಹಿಸಿದ್ದರು .
ಇನ್ನೂ ಚಿತ್ರದುರ್ಗ ತಾಲ್ಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ತಾಲ್ಲೂಕು ಕಛೇರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಗೆ ಬರುವಂತಹವರಿಂದ 100 ರಿಂದ 200 ರವರೆಗೂ ಹಾಗೂ ಖಾತೆ ಬದಲಾವಣೆಗೆ ಹೀಗೆ ಪ್ರತಿಯೊಂದಕ್ಕೂ ಸಹ ಜನ ಸಾಮಾನ್ಯವರಿಂದ ಹಣ ಕಿತ್ತುಕೊಳ್ಳುವ ಘಟನೆಗಳು ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5