ತುಮಕೂರು : ಬೆಲೆ ಏರಿಕೆ ಸಂದರ್ಭದಲ್ಲಿಯೂ ಬಿಜೆಪಿಗೆ 30 ಸಾವಿರ ಲೀಡ್ ಸಿಕ್ಕಿದೆ ಎಂದರೆ ಆಶ್ಚರ್ಯ ತಂದಿದೆ. ಸಿಂದಗಿಯಲ್ಲಿ ನಮ್ಮ ಪಕ್ಷ ಅಷ್ಟೋಂದು ಮತ ಸೆಳೆಯಲು ಆಗಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಪರಿಶೀಲನೆ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶದ ವಿಚಾರವಾಗಿ ಮಾತನಾಡಿದ ಅವರು, ಹಾನಗಲ್ ಸಿಎಂ ತವರು ಜಿಲ್ಲೆಯಾದರೂ ನಾವು ಗೆದ್ದಿರೋದು ಸಂತಸ ತಂದಿದೆ. ಜನ ಇವತ್ತು ಶ್ರೀನಿವಾಸ್ ಮಾನೆಯವರ ಕೈ ಹಿಡಿದಿದ್ದಾರೆ. ಅವರು ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡಿದ್ದರು, ಜನರ ಸಂಪರ್ಕಗಳಿಸಿದ್ದರು, ಹಾಗಾಗಿ ಜನ ಇಂದು ಅವರ ಕೈ ಹಿಡಿದಿದ್ದಾರೆ ಎಂದರು.
ಇನ್ನು ಎರಡು ಕ್ಷೇತ್ರದಲ್ಲಿ ಜನತಾದಳಕ್ಕೆ ನೆಲೆ ಇಲ್ಲದ ರೀತಿಯಾಗಿದೆ. ಸಿಂದಗಿಯಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು ಈಗ ನೆಲೆ ಕಳೆದುಕೊಂಡಿದೆ. ಇಷ್ಟೋಂದು ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ಹೀಗೆ ಅಗತ್ಯವಸ್ತು ಬೆಲೆ ಏರಿಕೆಯಾದ್ರು ಸಿಂದಗಿಯಲ್ಲಿ ಇನ್ನೂ ಬಿಜೆಪಿ ಅವರಿಗೆ ಮತ ಹಾಕ್ತಾರೆ ಅದು ನನಗೆ ಆಶ್ಚರ್ಯವಾಗಿದೆ. ಇಂದಿನ ಫಲಿತಾಂಶ ನೋಡಿದ್ರೆ, ಅಗತ್ಯ ವಸ್ತು ಬೆಲೆ ಏರಿಕೆಗೆ ಅರ್ಥ ಇಲ್ಲ ಅನ್ನಿಸುತ್ತೆ ಎಂದರು.
ವರದಿ : ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ .