ತಿಪಟೂರು: ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಜನರ ಆಸೆಗೆ ಮತ್ತು ಭಾವನೆಗಳಿಗೆ ಸರ್ಕಾರ ಎಳ್ಳುನೀರು ಬಿಟ್ಟಿದೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಕೆ ಷಡಕ್ಷರಿ ಅವರು ಹೇಳಿದರು.
ತಿಪಟೂರು ನಗರದ ಸರ್ಕಾರಿ ನೌಕರ ಭವನದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ನಾಲ್ಕು ವರ್ಷದಿಂದ ತಾಲೂಕಿನ ಸಮಸ್ಯೆಗಳು ಜನ ಎದುರಿಸುತ್ತಿದೆ. ಸಚಿವ ಬಿ.ಸಿ. ನಾಗೇಶ್ ಅವಧಿಯಲ್ಲಿ ಇದುವರೆಗೂ ಹೊಸ ಯೋಜನೆಗಳು ಬರಲಿಲ್ಲ. ಕಾಂಗ್ರೆಸ್ ಸರಕಾರ ಅನುಮೋದಿಸಿದ ಕಾಮಗಾರಿಗಳಿಗೆ ಅಡಚನೆ ಮಾಡಿ ನಿಲ್ಲಿಸಿದ್ದಾರೆ. ನಮ್ಮ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದು ಬಿಟ್ಟರೆ ಬೇರೆ ಏನು ಕೆಲಸ ಮಾಡಿಲ್ಲ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಿಪಟೂರು ನಗರಕ್ಕೆ ಮಿನಿ ವಿಧಾನಸೌಧ ನಗರಸಭೆ ಕಟ್ಟಡ ಐಬಿ ಕಟ್ಟಡ ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿದ್ದು ಎಂದರು.
ಸರ್ಕಾರಿ ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ರೈತರ ರಾಗಿ ಖರೀದಿಗೆ ನಿರ್ಬಂಧ ಮಾಡಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ತಿಪಟೂರು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಲೋಕೇಶ್ ತಿಪಟೂರು ಮಾತನಾಡಿ, ನಗರದ ಸ್ವಚ್ಛತೆ ಬಗ್ಗೆ ನಗರಸಭೆಯವರು ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ ಯಾಕೆನಹಳ್ಳಿ ಸುರೇಶ್, ಕೆಪಿಸಿಸಿ ಸದಸ್ಯ ಯೋಗೇಶ್ , ನಗರಸಭಾ ಸದಸ್ಯ ಎಂ.ಎಸ್.ಯೋಗೀಶ್ ಮತ್ತು ಸೊಪ್ಪು ಗಣೇಶ್ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB