ತಿಪಟೂರು: ಜನಸ್ಪಂದನ ಟ್ರಸ್ಟ್ ನ ನೂತನ ಕಚೇರಿಯಲ್ಲಿ ಡಾ. ಸಿಬಿ ಶಶಿಧರ್ 2022ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ತಾಲೂಕಿನ ಹೆಸರಾಂತ ಐತಿಹಾಸಿಕ ಸ್ಥಳಗಳು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಾರುವ ತಿಪಟೂರು ತಾಲೂಕಿನ ಐತಿಹಾಸಿಕ ಸ್ಥಳಗಳ ವಿನೂತನವಾದ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಇನ್ನು ಹಲವಾರು ಪ್ರಮುಖ ಕ್ಷೇತ್ರಗಳಾದ ಯಕ್ಷಗಾನ ಸೋಮನ ಕುಣಿತ ಸಾಂಸ್ಕೃತಿಕ ಕಲೆಗಳನ್ನು ಸಾರುವ ಹಾಗೂ ಇವುಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಜನಸ್ಪಂದನ ಟ್ರಸ್ಟ್ ಸದಸ್ಯರುಗಳು ಇದ್ದೇವೆ ಎಂದರು.
ಒಂದು ವಿನೂತನ ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ ಕೆಲಸ ನಿರ್ವಹಿಸಿದ ಶ್ರೀಕಾಂತ್ ಕೆಳ ಹಟ್ಟಿ ಮಮದ್ ಗೌಸ್ ಇವರುಗಳು 12 ತಿಂಗಳ ವರ್ಷದ ಕ್ಯಾಲೆಂಡರ್ ನ್ನು ಸಿದ್ಧಪಡಿಸಿದ್ದು, ತಿಪಟೂರು ತಾಲೂಕಿನ ಐತಿಹಾಸಿಕ ಒಂದೊಂದು ತಿಂಗಳಿಗೆ ಒಂದೊಂದು ಸ್ಥಳದ ಮಾಹಿತಿಯನ್ನು ನೀಡಿ ಕಾರ್ಯನಿರ್ವಹಿಸಿ 2022ರ ಬಹುರೂಪಿಯಾಗಿ ಕ್ಯಾಲೆಂಡರ್ ಮೂಡಿಬಂದಿದೆ ಎಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದರು.
ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಕುಂದೂರು ತಿಮ್ಮಯ್ಯ, ಮನೋಹರ್ ಪಾಟೀಲ್, ಬೆನ್ನಾಯಕನಹಳ್ಳಿ ಟ್ರಸ್ಟ್ ಮೈಲಾ ಸದಸ್ಯ ಚೈತ್ರ ದೇವರಾಜ್ , ಪ್ರಗತಿಪರ ರೈತ ನವೀನ್, ಸಂಸ್ಥೆಯ ಕಾರ್ಯಕರ್ತ ಗೌತಮ್ ಹಾಗೂ ಕಲಾವಿದ ಅಂಚೆ ಕೊಪ್ಪಲು ಶಂಕರಪ್ಪ ಲೈಫ್ ಸಂಸ್ಥೆಯ ರೇಣುಕಾ ಮತ್ತಿತರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy