ತುಮಕೂರು: ಜಿಲ್ಲಾ ಪಂಚಾಯತ್ ತುಮಕೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ನೇಹ ಜೀವನ ಫೌಂಡೇಶನ್ ಸಹಯೋಗದಲ್ಲಿಂದು ಗುಬ್ಬಿ ತಾಲೂಕಿನ ಇಡಗೂರು ಗ್ರಾಮ ಪಂಚಾಯಿತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಕುರಿತು ವಿಶೇಷ ಗ್ರಾಮಸಭೆ ಸ್ವ ಸಹಾಯ ಸಂಘದ ಮಹಿಳೆಯರಿಂದ ಜಾಥಾ ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಕಿರುಚಿತ್ರ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮಸಭೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಗೋವರ್ಧನ್ ಅವರು, ಜಲ ಜೀವನ್ ಮಿಷನ್ ಯೋಜನೆಯ ಗುರಿ ಉದ್ದೇಶಗಳು, ಗ್ರಾಮೀಣ ಪ್ರದೇಶದ ಜನರಿಗೆ ಶುದ್ದ ಮತ್ತು ಸುರಕ್ಷಿತ ನೀರಿನ ಅವಶ್ಯಕತೆ, ಮೀಟರ್ ಅಳವಡಿಕೆ ಮಹತ್ವ, ಸಮುದಾಯವಂತಿಕೆ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರ ಜವಾಬ್ದಾರಿಗಳು, FTK ಅನುಕೂಲಗಳು, ನೀರಿನ ಪರೀಕ್ಷಾ ವಿಧಾನ, ಶೌಚಾಲಯ ಬಳಕೆ, ಬಚ್ಚಲುಗುಂಡಿ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಮೊದಲಾದ ವಿಷಯಗಳನ್ನು ಚರ್ಚೆ ಮಾಡಲಾಯಿತು.
ಮಾಹಿತಿ ಶಿಕ್ಷಣ ತಜ್ಞರಾದ ಸುಜಾತ ಅವರು ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಕಿರುಚಿತ್ರ ಪ್ರದರ್ಶಿಸಿ ಗ್ರಾಮಗಳ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರಲ್ಲದೇ ಉತ್ತಮ ಆರೋಗ್ಯಕ್ಕೆ ಶುದ್ದ ಕುಡಿಯುವ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ, ಚುನಾಯಿತ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸ್ವ ಸಹಾಯ ಸಂಘದ ಮಹಿಳೆಯರು, ಶಾಲಾಶಿಕ್ಕರು, ವಾಟರ್ ಮ್ಯಾನ್ ಗಳು ಹಾಗೂ ಸುಜಾತ, ಗೋವರ್ಧನ ಹಾಜರಿದ್ದರು.
ವರದಿ: ಮಂಜುನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB