ಸರಗೂರು: ನವೆಂಬರ್ 28ರಿಂದ ಡಿಸೆಂಬರ್ 1ರವರೆಗೆ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಬೇಲದಕುಪ್ಪೆ ಶ್ರೀ ಮಹದೇಶ್ವರ ಟ್ರಸ್ಟ್ ಪದಾಧಿಕಾರಿಗಳು ಪೂರ್ವ ಭಾವಿ ಸಭೆ ನಡೆಸಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇದಾಗಿರುವುದರಿಂದಾಗಿ ಜನರನ್ನು ಸರ್ಕಾರದ ನಿಯಮದಂತೆ ನಿಯಂತ್ರಿಸಬೇಕಾಗುತ್ತದೆ. ಅರಣ್ಯದೊಳಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೂಜೆಯಲ್ಲಿ ಭಾಗಿಯಾಗುವವರು ಕೊವಿಡ್ ತಪಾಸಣೆ ನಡೆಸಿ ಪರೀಕ್ಷಾ ವರದಿಯನ್ನು ವಲಯ ಅರಣ್ಯಾಧಿಕಾರಿಗೆ ಸಲ್ಲಿಸಿ, ಬಳಿಕ ಪಾಸ್ ಪಡೆಯ ಬೇಕು. ಆದರೆ ಅರಣ್ಯದೊಳಗೆ ಪ್ರವೇಶಿಸಬಾರದು ಎಂದು ಅಧಿಕಾರಿಗಳು ಹೇಳಿದರು.
ಸಾರ್ವಜನಿಕರಿಗೆ ದೇವಸ್ಥಾನಕ್ಕೆ ಮುಕ್ತ ಅವಕಾಶ ನೀಡಲಾಗುವುದಿಲ್ಲ. ಜೊತೆಗೆ ಜಾತ್ರೆಯಲ್ಲಿ ಕೊವಿಡ್ 19 ನಿಯಂತ್ರಣ ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ತಿಳಿಸಲಾಗಿದೆ.
ಸಭೆಯಲ್ಲಿ ಸರಗೂರು ವೃತ್ತ ನಿರಿಕ್ಷಕರಾದ ಆನಂದ್ ಎನ್. , ಹೆಡಿಯಾಲ ವಲಯದ ಅರಣ್ಯಾಧಿಕಾರಿ ಎ ಸಿ ಎಫ್ ರವಿಕುಮಾರ್, ಸರಗೂರು ಪಿ ಎಸ್ ಐ ಶ್ರಾವಣ ದಾಸ ರೆಡ್ಡಿ, ಟ್ರಸ್ಟ್ ಅಧ್ಯಕ್ಷ ನಿಂಗರಾಜು, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯಕ, ಹಾದನೂರು ಯಾಜಮಾನರು ಮಹದೇವಯ್ಯ, ಟ್ರಸ್ಟ್ ಸದಸ್ಯರು ಹಾಗೂ ಅರಣ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರು ಕೂಡ ಭಾಗಿಯಾಗಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700