ದಾವಣಗೆರೆ: ಕೂಡಲಸಂಗಮ ಪೀಠದ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ಜನ್ಮ ದಿನಾಚರಣೆಯ ಅಂಗವಾಗಿ ಡಿ.23ರಂದು ನಗರದ ಸದ್ಯೋಜ್ಯಾತ ಮಠದಲ್ಲಿ ಬೆಳಗ್ಗೆ 10:30ಕ್ಕೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜಿ.ಅಜಯ್ ಕುಮಾರ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ತಮ್ಮ ಜನ್ಮ ದಿನಾಚರಣೆಯ ಅಂಗವಾಗಿ ಡಿ.23ರಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಸ್ವತಃ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದಲ್ಲಿ ಹೇಳಿದಂತೆ ‘ರಕ್ತ ಕೊಟ್ಟೇವು, ಮೀಸಲಾತಿ ಬಿಡೆವು’ ಘೋಷಣೆಯಂತೆ ಈ ಬಾರಿ ಜಗದ್ಗುರುಗಳ 42ನೇ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಕ್ತದಾನ ಮಾಡುವುದರ ಮೂಲಕ ರಕ್ತ ದಾಸೋಹ ಕಾರ್ಯಕ್ರಮದ ಮೂಲಕ ಮೀಸಲಾತಿ ಹೋರಾಟವನ್ನು ಮುನ್ನಲೆಗೆ ತಂದು ಸರ್ಕಾರಕ್ಕೆ ಅರಿವು ಮೂಡಿಸಲಾಗುವುದು ಎಂದರು.
ಪಂಚಮಸಾಲಿ ಸಮಾಜದ ಜನಾಂಗವು ಜಗತ್ತಿನಲ್ಲಿ ಸಾಮಾಜಿಕ ಕಳಕಳಿ ಉಳ್ಳಂತವರು ಆದುದರಿಂದಲೇ ಸ್ವಾಮೀಜಿಗಳ ಜನ್ಮ ದಿನದಂದು ಜನರ ಪ್ರಾಣವನ್ನು ಉಳಿಸುವ ಸಲುವಾಗಿ ಕಳೆದ ವರ್ಷ ರಾಜ್ಯದಲ್ಲಿ 5 ಸಾವಿರ ಯೂನಿಟ್ ರಕ್ತದಾನವನ್ನು ಮಾಡಲಾಗಿದ್ದು, ಅದರಂತೆಯೇ ಈ ಬಾರಿಯೂ ಸಮಾಜದ ಸಂಘಟನೆ ರಾಜ್ಯದಲ್ಲಿ ಹೆಚ್ಚಾಗಿದ್ದು, ಕಳೆದ ಸಾಲಿಗಿಂತ ಈ ಬಾರಿ ಇನ್ನೂ ಹೆಚ್ಚು ಯೂನಿಟ್ ರಕ್ತದಾನ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಆದ್ದರಿಂದ ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ 2 ಎ ಮೀಸಲಾತಿ ಹೋರಾಟಕ್ಕೆ ಬಲ ನೀಡಬೇಕೆಂದು ಮನವಿ ಮಾಡಿದರು.
ಈಗಾಗಲೇ 107 ಮಂದಿ ರಕ್ತದಾನಕ್ಕೆ ತಮ್ಮ ಹೆಸರನ್ನು ನೊಂದಾಯಿಸಿಕೊAಡಿದ್ದು ಇನ್ನು ಹೆಚ್ಚಾಗಲಿದೆ. ಶಿಬಿರದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸೇರಿದಂತೆ ಸಮಾಜದ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ಧಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ್ ಗೋಪನಾಳ್, ಟಿ.ಶಂಕರಪ್ಪ, ಕಂಚಿಕೆರೆ ಕೊಟ್ರೇಶ್, ಬಾದಾಮಿ ಮಲ್ಲಿಕಾರ್ಜುನಪ್ಪ, ಮಹಾಂತೇಶ್ ಒಣರೊಟ್ಟಿ, ಕೊಳೆನಹಳ್ಳಿ ನಾಗರಾಜ್, ಜಯಪ್ರಕಾಶ್ ಸತ್ತೂರು, ದೇವರಬೆಳಕೆರೆ ಗಣೇಶ್, ವಾಣಿಭೂಷಣ್, ಸೋಗಿ ಶಾಂತಕುಮಾರ್ ಇತರರು ಇದ್ದರು.
ವರದಿ: ಆನಂದ್ ತಿಪಟೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700