ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಜಯಂತ್ ಸೈಕೋ ನಡವಳಿಕೆ ಕಳೆದ ಹಲವು ಸಂಚಿಕೆಗಳಲ್ಲಿ ವೀಕ್ಷಕರು ಗಮನಿಸುತ್ತಿದ್ದಾರೆ. ಜಯಂತ್ ತನ್ನ ಪತ್ನಿ ಕುರಿತು ವಿಪರೀತ ಪೊಸೆಸಿವ್ ನೆಸ್ ಬೆಳೆಸಿಕೊಂಡಿದ್ದಾನೆ.
ಜಯಂತ್ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಡಾಕ್ಟರ್ ಜಾಹ್ವವಿಯ ಮೈ ಮುಟ್ಟುವುದು ಜಯಂತ್ಗೆ ಅಸಹನೀಯ ಎಂದೆನಿಸಿದ್ದು, ಡಾಕ್ಟರ್ ಸ್ಕೇತಾಸ್ಕೋಪ್ ಅನ್ನು ಜಾಹ್ನವಿಯ ಎದೆಯಲ್ಲಿಟ್ಟು ಪರೀಕ್ಷಿಸಿದಾಗ ಜಯಂತ್ ಗೆ ಕಿರಿಕಿರಿಯಾಗಿದೆ.
ಇದೇ ಸಮಯದಲ್ಲಿ ನಾಡಿ ಮಿಡಿತ ಟೆಸ್ಟ್ ಮಾಡಲು ಡಾಕ್ಟರ್ ಜಾಹ್ನವಿ ಕೈ ಹಿಡಿದುಕೊಂಡಾಗ ವಿಪರೀತ ಹಿಂಸೆ ಅನುಭವಿಸಿದ್ದಾನೆ ಜಯಂತ್. ಎಲ್ಲಾ ಟೆಸ್ಟ್ ಮಾಡಿದ ಬಳಿಕ “ನಾನು ಪ್ರಿಸ್ಕ್ರಿಪ್ಷನ್ ಬರೆದುಕೊಡ್ತಿನಿ, ಅದನ್ನ ಫಾಲೋ ಮಾಡಿ” ಎಂದು ವೈದ್ಯರು ಹೇಳುತ್ತಾರೆ.

ಆಮೇಲೆ ಹುಷಾರು ಎಂದು ಜಾಹ್ವವಿಯ ಬೆನ್ನಮೇಲೆ ಡಾಕ್ಟರ್ ಕೈ ಇಟ್ಟಾಗ ಜಯಂತ್ ಉರಿದುಹೋಗಿದ್ದಾನೆ. ಪರೀಕ್ಷೆಯ ಬಳಿಕ ಹೊರಗೆ ಪತ್ನಿಯನ್ನು ಕುಳ್ಳಿರಿಸಿದ ಜಯಂತ್ “ನಾನು ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬರ್ತೇನೆ” ಎಂದು ನೇರವಾಗಿ ಡಾಕ್ಟರ್ ರೂಂಗೆ ನುಗ್ಗಿದ್ದಾನೆ.
“ನನ್ನ ಬಿಟ್ಟು ಬೇರೆ ಯಾರೂ ಅವರ ಕೈ ಮುಟ್ಟಬಾರದು” ಎಂದು ಡಾಕ್ಟರ್ ಕೈಯನ್ನೇ ಜಯಂತ್ ಮುರಿಯುತ್ತಾನೆ. ಝೀ ಕನ್ನಡ ವಾಹಿನಿ ಹಂಚಿಕೊಂಡ ಈ ಪ್ರಮೋಗೆ ನೂರಾರು ಕಾಮೆಂಟ್ಗಳು, ಸಾವಿರಾರು ಲೈಕ್ ಗಳು ಬಂದಿವೆ. ಬಹುತೇಕರು “ಸೈಕೋ ಜಯಂತ್ದು ಅತಿಯಾಯ್ತು” ಎನ್ನುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


