ತುರುವೇಕೆರೆ: ಅಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಜಿ ಅಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಗಂಗಯ್ಯನವರ ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಟಿ. ಕೃಷ್ಣಪ್ಪನವರ ಪರವಾಗಿ ಬೈಕ್ ರ್ಯಾಲಿ ನಡೆಸಿ ಭರ್ಜರಿ ರೋಡ್ ಶೋ ನಡೆಸಿರು.
ನಂತರ ಮಾತನಾಡಿದ ಸಿದ್ದಗಂಗಯ್ಯ ಅಮ್ಮಸಂದ್ರ ಮತ್ತು ಹಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆ ಡಿ ಎಸ್ ಗೆ ಅಪಾರವಾದ ಜನಬೆಂಬಲ ವ್ಯಕ್ತವಾಗಿದ್ದು ಇದರಂತೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಆಗಮಿಸಿದಾಗ ಸ್ವಯಂ ಪ್ರೇರಿತರಾಗಿ ಕಾರ್ಯಕರ್ತರಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದರು.
ಇದು ಜೆಡಿಎಸ್ ಪಕ್ಷದ ಮೇಲೆ ಅವರಿಗೆ ಇರುವ ಅಭಿಮಾನವನ್ನು ತೋರುತ್ತದೆ ಈ ಬಾರಿ ನೂರಕ್ಕೆ ನೂರು ಜೆಡಿಎಸ್ ಶಾಸಕರಾಗೋದು ಖಚಿತವಾಗಿದೆ ಎಂದರು.
ದಂಡಿನ ಶಿವರ ಹೋಬಳಿಯ ಈ ಎರಡು ಪಂಚಾಯಿತಿ ವ್ಯಾಪ್ತಿಗಳಲ್ಲಿ ಎಲ್ಲಾ ಪಕ್ಷಗಳಿಗಿಂತ ಎರಡು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಎಂ ಟಿ ಕೃಷ್ಣಪ್ಪನವರು ಶಾಸಕರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಅವರ ಕೈ ಹಿಡಿಯಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಾರಸಂದ್ರ ಮಂಜು. ಅಡಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ. ಶ್ರೀನಿವಾಸ್. ಗಿರಿಯನಹಳ್ಳಿ ಗ್ರಾಮದ ಗಿರೀಶ್. ಅಮ್ಮಸಂದ್ರ ಗ್ರಾಮದ ಬೋರೇಗೌಡ. ಧನಂಜಯ. ವೀರಶೈವ ಮುಖಂಡ ಪಟೇಲ್ ಲೋಕೇಶ್. ಸಿದ್ದೇಗೌಡರು. ಜಗದೀಶ್ ಮತ್ತಿತರ ಅಪಾರ ಕಾರ್ಯಕರ್ತರುಗಳು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy