ಮಧುಗಿರಿ: ಚಿತ್ರ ನಿರ್ದೇಶಕ ರವಿ ಆರ್.ರಗಣಿ ರವರು ಜೆಡಿಎಸ್ ಪಕ್ಷದ ಬಗ್ಗೆ ಹಾಗೂ ನಮ್ಮ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ, ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದ್ದು ಈಗ ಚುನಾವಣೆ ನಡೆದರೂ ನಾವು ಗೆಲ್ಲಲಿದ್ದೇವೆ ಎಂದು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿಜವರ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ 3 ಬಾರಿ ಶಾಸಕರನ್ನು ಕೊಟ್ಟ ಜೆಡಿಎಸ್ ಪಕ್ಷವು ಸಧೃಡವಾಗಿದ್ದು, ಈಗ ಚುನಾವಣೆ ನಡೆದರೂ ನಾವು ಗೆಲ್ಲಲಿದ್ದೇವೆ, ರವಿ ಆರ್. ಗರಣಿಯವರು ಅಭಿವೃದ್ಧಿ ನೋಡಿ ಮಾತನಾಡಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಗೆ ವಿರೋಧ ಪಕ್ಷವೇ ಇಲ್ಲ. ಎಲ್ಲವೂ ರಾಜಣ್ಣನವರ ಪರವಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಈವರೆಗೂ ಮೂವರು ಶಾಸಕರು ಆಯ್ಕೆಯಾಗಿರುವುದನ್ನು ಮರೆಯಬೇಡಿ ಎಂದು ಟಾಂಗ್ ನೀಡಿದರು.
ಮುಖಂಡ ಸಿಡ್ರಗಲ ಶ್ರೀನಿವಾಸ್ ಮಾತನಾಡಿ, ರವಿ ಆರ್. ಗರಣಿ ಎಂಬ ವ್ಯಕ್ತಿ ಜೆಡಿಎಸ್ ಎಲ್ಲಿದೆ, ವಿರೋಧ ಪಕ್ಷ ಇಲ್ಲ ಎಂದಿದ್ದಾರೆ. ರವಿ ಮೊದಲು ದೇಶದಲ್ಲಿ ಕಾಂಗ್ರೆಸ್ ಕಾಣೆಯಾಗುತ್ತಿದೆ ಎಂಬುದನ್ನು ಮರೆಯಬೇಡಿ. ರಾಜ್ಯದಲ್ಲಿ ಅಕ್ಕಿ, ಯೂರಿಯಾ ಕಳ್ಳ ಸಾಗಾಣೆ ನಡೆಯುತ್ತಿದೆ. ಎರಡುವರೆ ವರ್ಷಕಳೆದರೂ ಹೆದರಿಕೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅವಕಾಶ ನೀಡಿಲ್ಲ. 139 ಶಾಸಕರಿದ್ದರೂ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಸುವ ಶಕ್ತಿಯಿಲ್ಲ. ಕನಿಷ್ಟ ನಮ್ಮ ಎನ್‌ಡಿಎ ಸಂಸದರು, ಕೇಂದ್ರ ಸಚಿವರು ಮಾಡುವ ಕೆಲಸವನ್ನು ನಿಮ್ಮ ಸರಕಾರ ಮಾಡದೆ ರೈಲ್ವೆ ಕಾಮಗಾರಿ ನೆನಗುದಿಗೆ ಬಿದ್ದಿದ್ದು ಕೇವಲ ಅಧಿಕಾರಕ್ಕಾಗಿ ನಾನು ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಾ ಜನರ ಕಲ್ಯಾಣ ಮರೆತಿದ್ದು ಮೊದಲು ಇದರ ಬಗ್ಗೆ ಗಮನ ಕೊಡಬೇಕಾಗಿದೆ ಎಂದರು.
ಮುಖಂಡ ವೆಂಕಟಾಪುರ ಗೋವಿಂದರಾಜು ಮಾತನಾಡಿ ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಮುಂದಿನ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನೂ ಇವರ ನೇತೃತ್ವದಲ್ಲಿ ನಡೆಯಲಿದ್ದು ಮುಂದೆ ಅವರೇ ಅಭ್ಯರ್ಥಿಯಾಗುವುದು ಖಚಿತ. ಕಾರ್ಯಕರ್ತರು ಯಾರೂ ಧೃತಿಗೆಟ್ಟಿಲ್ಲ. ಹೈಕಮಾಂಡ್ ನಮಗೆ ಯಾರನ್ನು ಸೂಚಿಸಿದರೂ ಅವರಿಗೆ ಕಾಯಕರ್ತರಾಗಿ ನಮ್ಮ ಬೆಂಬಲ ಇರುತ್ತದೆ. ಕಾಂಗ್ರೆಸ್ ಉಳಿಸಿಕೊಳ್ಳಲು ನೀವು ಚಿಂತನೆ ಮಾಡಬೇಕಾಗಿದೆ ಎಂದು ಗರಣಿ ರವಿಗೆ ಪ್ರಶ್ನೆ ಹಾಕಿದರು.
ಮುಖಂಡ ಕೊಲ್ಲಾರಿ ಮಂಜು ಮಾತನಾಡಿ, ಮಧುಗಿರಿ ವಿಧಾನಸಭಾ ಸ್ಪರ್ಧೆಗಾಗಿ ಜೆಡಿಎಸ್ ಟಿಕೆಟ್ಗಾಗಿ ಹಿಂದೆ ಕಾಂಗ್ರೆಸ್ ನಿಂದ ಹೋರಾಡಿದ ಸಾಸಲು ಸತೀಶ್ ಟಿಕೆಟ್ ಕೇಳಿದರು, ಈಗ 2028ಕ್ಕೆ ಕೊಂಡವಾಡಿ ಚಂದ್ರಶೇಖರ್ ಕೂಡ ಟಿಕೆಟ್ ಕೇಳಿರುವುದು ತಪ್ಪಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಧೃಡವಾಗಿದ್ದು ದೇವೇಗೌಡರು, ಕುಮಾರಸ್ವಾಮಿ ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲೋದು ಮಾತ್ರ ಜೆಡಿಎಸ್ ಪಕ್ಷದವರೇ ಎಂದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC