ಸರಗೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜೇಗೌಡ ಗೆಲುವಿನ ನಗೆ ಬೀರಿದ ಹಿನ್ನೆಲೆಯಲ್ಲಿ ಸರಗೂರು ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು.
ಬಿಜೆಪಿ ಹಾಗೂ ಜೆಡಿಎಸ್ ನಡುವೆ ನಡೆದಿದ್ದ ನೇರ ಸ್ಪರ್ಧೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜೇಗೌಡ ಐದು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಜೇಗೌಡ ಗೆಲುವು ಸಾಧಿಸುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು, ಸದಸ್ಯರು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಜಿ.ಗೋಪಾಲಸ್ವಾಮಿ, ಹನು ಎಚ್.ಮಾ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಪ.ಪಂ. ಸದಸ್ಯ ಎಸ್.ಎಲ್ ರಾಜಣ್ಣ, ಚೈತ್ರ ಸ್ವಾಮಿ ಪಟ್ಟಣ ಪಂಚಾಯಿತಿ ಸದಸ್ಯೆ ಪ.ಪಂ. ಸದಸ್ಯೆ ಮಗನಾದ ಪುಟ್ಟ ಹನುಮಯ್ಯ, ಶ್ರೀನಿವಾಸ ಪ್ರಧಾನ ಕಾರ್ಯದರ್ಶಿ, ಕಲೀಲ್ ಅಲ್ಪಸಂಖ್ಯಾತರ ಅಧ್ಯಕ್ಷ ಸರಗೂರು, ಮಹದೇವಪ್ಪ ಕೆ.ಪಿ.ಉದಯಕುಮಾರ್, ಸಿದ್ದರಾಜು ಆರ್.ಸುರೇಂದ್ರ ಕುಮಾರ್ ನರಸೀಪುರ, ನಾಗರಾಜ್, ನಾಗೇಂದ್ರ, ನಾಗರಾಜ್ ಸರಗೂರು, ಮಹೇಂದ್ರ ಸಾಗರೆ, ಜಯರಾಮ, ಚೆನ್ನಪ್ಪ ಕಾಳೇಗೌಡರಹುಂಡಿ, ಆರ್ ಉದಯಕುಮಾರ್, ಉಮೇಶ್, ಪುಟ್ಟಸ್ವಾಮಿ, ಮಂಜು ಕಾಳೇಗೌಡರಹುಂಡಿ ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700