ತುಮಕೂರು: ಹೊಟೇಲ್ ಉದ್ಯಮಿ ಹಾಗೂ ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಕೆ.ಜಿ.ಎಲ್.ರವಿ(ಕ್ಯಾತ್ಸಂದ್ರ ಗಂಗಣ್ಣ,ಲಿಂಗಣ್ಣ ರವಿ) 57 ವರ್ಷ, ಬುಧವಾರ ಮಧ್ಯಾಹ್ನ 12 ರ ಹೊತ್ತಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಕ್ಷವನ್ನು ಬಲವಾಗಿ ಕಟ್ಟುವ ಉದ್ದೇಶದಿಂದ ಇತ್ತೀಚೆಗೆ ಜಿಲ್ಲಾ ಜೆಡಿಯು ಕಚೇರಿಯನ್ನು ಸಹ ಕರಿಬಸವೇಶ್ವರ ವೃತ್ತದಲ್ಲಿ ತೆರೆದಿದ್ದರು. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಜೆಡಿಯು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಜೆ.ಹೆಚ್.ಪಟೇಲ್, ಎಂ.ಪಿ.ನಾಡಗೌಡ, ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ.ಪಟೇಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಮೂಲತಃ ತುಮಕೂರಿನವರೇ ಆದ ಕೆಜಿಎಲ್ ರವಿ ಅವರು ನಗರದ ಅರಳೇಪೇಟೆಯಲ್ಲಿ ವಾಸವಾಸವಾಗಿದ್ದ ಹೊರಪೇಟೆ ಸರ್ಕಲ್ ನಿಂದ ಕೆ.ಆರ್.ಬಡಾವಣೆಗೆ ಹೋಗುವ ರಸ್ತೆಯಲ್ಲಿ ಚಂದ್ರಮೌಳೇಶ್ವರ ಹೆಸರಿನ ಹೊಟೇಲ್ ಒಂದನ್ನು ತಮ್ನ ಕುಟುಂಬದ ಸದಸ್ಯರೊಂದಿಗೆ ನಡೆಸುತ್ತಿದ್ದರು.
ಓರ್ವ ಗಂಡು ಮತ್ತು ಹೆಣ್ಣು ಮಕ್ಕಳಿದ್ದು, ಹೆಂಡತಿ, ಸಹೋದರರು, ಬಂಧು, ಬಳಗವನ್ನು ಆಗಲಿದ್ದಾರೆ. ಇವರ ಅಂತ್ಯಕ್ರಿಯೆ ಅಕ್ಟೋಬರ್ 24ರ ಗುರುವಾರ ಬೆಳಗ್ಗೆ ಕುಣಿಗಲ್ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296