ಸರಗೂರು: ಕೊರೊನಾ ಮೂರನೇ ಅಲೆ ಹಾಗೂ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ ಹೀಗಾಗಿ ತಾಲ್ಲೂಕು ಆಡಳಿತ ಸೋಂಕಿತರ ಚಿಕಿತ್ಸೆ ಗಾಗಿ ಬೆಡ್ ಆಕ್ಸಿಜನ್ ಹಾಗೂ ಔಷಧ ಇನ್ನಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ವೈದ್ಯರು ಸಾರ್ವಜನಿಕರ ಚಿಕಿತ್ಸೆ ಗೆ ಸದಾ ಸಿದ್ದರಾಗಿರಬೇಕು ಎಂದು ಹೇಳಿದರು.
ಸಾರ್ವಜನಿಕ ರು ಸರ್ಕಾರದ ಮಾರ್ಗ ಸೂಚಿಯನ್ನು ಉಲ್ಲಂಘಿಸದೇ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸುವ ಮೂಲಕ ದೈಹಿಕ ಅಂತರ ಕಾಯ್ದು ಕೊಳ್ಳಬೇಕು. ಲಸಿಕೆ ಪಡೆಯದವರನ್ನು ಗುರುತಿಸಿ ತಾಲ್ಲೂಕು ಆಡಳಿತ ಪೋಲಿಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಲಸಿಕೆ ಕೊಡಿಸಬೇಕು. ಮಕ್ಕಳ ಆರೋಗ್ಯ ದ ಹಿತದೃಷ್ಟಿಯಿಂದ ಲಸಿಕೆ ಕೊಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದು ಹೇಳಿದರು.
ಇನ್ನೂ ರಾತ್ರಿ ವೇಳೆ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ಆಗಮಿಸಿದರೆ, ಯಾವುದೇ ವೈದ್ಯಾಧಿಕಾರಿಗಳು ಇರುವುದಿಲ್ಲ ಇದರಿಂದ ತುಂಬಾ ತೊಂದಯಾಗುತ್ತಿದೆ . ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಪಟ್ಟಣ ಪಂಚಾಯಿತಿ ಸದಸ್ಯ 9 ನೇ ವಾರ್ಡ್ ಶ್ರೀನಿವಾಸ್ ಮತ್ತು ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಕ್ಷಣ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ವೈದ್ಯರುಗಳನ್ನು ನೇಮಿಸಿವಂತೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಹಲವು ತಿಂಗಳಿಂದ ಇಂಜಿನಿಯರ್ ಇಲ್ಲದೇ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಯಾಗಿದೆ . ತಕ್ಷಣ ಇಂಜಿನಿಯರ್ ನ್ನು ನೇಮಿಸುವಂತೆ ಸದಸ್ಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಯೋಗೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಕೋಟೆ ಮತ್ತು ಸರಗೂರು ವೈದ್ಯಾಧಿಕಾರಿ ಗಳು ಡಾ.ಸೋಮಣ್ಣ, ಡಾ.ಪಾರ್ಥ ಸಾರಥಿ, ತಹಶೀಲ್ದಾರ್ ನರಗುಂದ, ಸರಗೂರು ತಹಶೀಲ್ದಾರ್ ಚಲುವರಾಜು, ಸಿಪಿಐ ಎಂ ಆನಂದ, ಎಸ್ ಐ ಶ್ರಾವಣದಾಸರೆಡ್ಡಿ, ಪ.ಪಂ.ಮುಖ್ಯಾಧಿಕಾರಿ ಬಿ.ಜಿ. ಸತೀಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.
ವರದಿ: ಚಂದ್ರಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy