5ಜಿ ತಂತ್ರಜ್ಞಾನದ ವಿರುದ್ಧ ಸಂಬಂಧಿಸಿದ ಕೇಸ್ ನಲ್ಲಿ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರಿಗೆ ಹೈಕೋರ್ಟ್ 20 ಲಕ್ಷ ರೂ. ದಂಡ ವಿಧಿಸಿತ್ತು. ಇದನ್ನ ಮರು ಪರಿಶೀಲಿಸಿರುವ ಈಗ ಹೈಕೋರ್ಟ್ 2 ಲಕ್ಷಕ್ಕೆ ಇಳಿಸಿದೆ.
ಭಾರತದಲ್ಲಿ 5ಜಿ ಅಳವಡಿಕೆ ವಿರುದ್ಧದ ಜೂಯ್ಲಿ ಚಾವ್ಲಾ ಕೋರ್ಟ್ ಮೆಟ್ಟಿಲೇರಿದ್ದರು, ಈ ಮೊಕದ್ದಮೆಗಾಗಿ ನಟಿ ಜೂಹಿ ಚಾವ್ಲಾ ಅವರಿಗೆ ಹೈಕೋರ್ಟ್ ವಿಧಿಸಿದ್ದ ದಂಡವನ್ನು 20 ಲಕ್ಷದಿಂದ 2 ಲಕ್ಷಕ್ಕೆ ಇಳಿಸಲು ದೆಹಲಿ ಹೈಕೋರ್ಟ್ ಮುಂದಾಗಿದೆ. ಈ ಬಾರಿ ಕೋರ್ಟ್ ಷರತ್ತೊಂದನ್ನ ವಿಧಿಸಿದೆ ಸಾರ್ವಜನಿಕರಿಗಾಗಿ ಒಂದಿಷ್ಟು ಸೇವೆ ಮಾಡಬೇಕು ಎಂದು ತಾಕೀತು ಮಾಡಿದೆ. ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಜೂಹಿ ಚಾವ್ಲಾ ಸೇರಿದಂತೆ ಇತರ ಇಬ್ಬರ ಮೇಲೆ ದಂಡ ವಿಧಿಸಿದೆ. Delhi High Court to reduce Juhi Chawla’s fine in 5G suit to Rs 2 lakh
ಭಾರತದಲ್ಲಿ 5ಜಿ ತಂತ್ರಜ್ಞಾನದ ರೋಲ್ ಔಟ್ ವಿರುದ್ಧ ಜೂಹಿ ಚಾವ್ಲಾ ಅವರ ಸಿವಿಲ್ ಮೊಕದ್ದಮೆಯನ್ನು ದಾಖಲಿಸಿದ್ದರು ಭಾರತಕ್ಕೆ 5 ಜಿ ತಂತ್ರಜ್ಞಾನಕ್ಕೆ ಅವಕಾಶ ಕೊಡದಂತೆ ಮನವಿ ಮಾಡಿದ್ದರು ಈ ಮೊಕದ್ದಮೆಯನ್ನ ನ್ಯಾಯಮೂರ್ತಿ ಜೆ.ಆರ್.ಮಿಧಾ ವಜಾಗೊಳಿಸಿದರು. ಪ್ರಚಾರಕ್ಕಾಗಿ ಈ ರೀತಿಯ ಮೊಕದ್ದಮೆ ಮಾಡಲಾಗಿದೆ ಎಂದು ನ್ಯಾಯಾಲಯವು ಭಾವಿಸಿ ಫಿರ್ಯಾದಿದಾರರ ಮೇಲೆ 20 ಲಕ್ಷ ರೂ. ದಂಡ ವಿಧಿಸಿದರು.
ಈ ತೀರ್ಪನ್ನ ಪ್ರಶ್ನಿಸಿ ನಟಿ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದರು, ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ನಂತರ ಕೋರ್ಟ್ ಅರ್ಜಿಯನ್ನ ವಜಾ ಗೊಳಿಸಿ ದಂಡದ ಮೊತ್ತವನ್ನ ಇಳಿಸಿದೆ. ನಂತರ ಜೂಹ್ಲಿ, “ನಾನು 5 ಜಿ ತಂತ್ರಜ್ಞಾನದ ವಿರುದ್ಧವಲ್ಲ ತಂತ್ರಜ್ಞಾನ ಸುರಕ್ಷಿತ ಎಂದು ಸರ್ಕಾರದ ಸೃಷ್ಟಿಕರಣ ಪಡೆಯಲು ಮಾತ್ರ ಅರ್ಜಿ ಹಾಕಿದ್ದೆ” ಎಂದು ಹೇಳಿದ್ದರು.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy