ಮಧುಗಿರಿ: ದೇಶದ ಸಂಸ್ಕೃತಿ ಉಳಿಯಲು ಗ್ರಾಮೀಣ ಭಾಗದ ಕೊಡುಗೆ ಅಪಾರವಾಗಿದೆ ಎಂದು ಮಧು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಮಧು ತಿಳಿಸಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ತಮ್ಮ ಕಚೇರಿ ಮುಂಭಾಗದಲ್ಲಿ ಕ್ಷೇತ್ರದ ಜನತೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಬು ಹಾಗೂ ಎಳ್ಳು-ಬೆಲ್ಲ ವಿತರಿಸುವ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರೀಕರಣ ಮತ್ತು ಆಧುನೀಕರಣದ ಜೀವನ ಶೈಲಿಯಿಂದ ಗ್ರಾಮೀಣ ಬದುಕಿನ ಹಳ್ಳಿಯ ಸೊಗಡು ಮಾಯವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಉಳಿಸುವ ಪಣ ತೊಡಬೇಕು. ಹೊಸ ವರುಷ ಎಲ್ಲರಿಗೂ ಹರುಷ ತರಲಿದ್ದು, ಕ್ಷೇತ್ರದ ಅಭಿವೃದ್ದಿಗೆ ಎಲ್ಲರೂ ಒಗ್ಗಟ್ಟಾಗಬೇಕಾಗಿದೆ ಎಂದರು.
ಸ್ವಾಮಿ ವಿವೇಕಾನಂದರ ಜನ್ಮದಿನವಾದ ಇಂದು ಅವರ ಪ್ರೇರಣೆಯಿಂದ ಈ ಕಾರ್ಯ ಮಾಡುತ್ತಿದ್ದೇನೆ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಯುವಕರು ಮುಂದೆ ಬರಬೇಕು ಎಂದ ಅವರು ಸದಾ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಈ ವೇಳೆ ಮಧು ಚಾರಿಟಬಲ್ ಟ್ರಸ್ಟ್ ನ ಸದಸ್ಯರಾದ ನಾಗೇಶ್ ಬೈರೇಶ್ ಗೌಡ, ಮಂಜು, ಕೆಂಪೇಗೌಡ, ಚೇತನ್ ಗೌಡ, ಮಲ್ಲಿಕಾರ್ಜುನ, ಮಂಜುನಾಥ, ಮಧು, ತಿಮ್ಮಾರೆಡ್ಡಿ, ಹನುಮಂತರೆಡ್ಡಿ, ರಮೇಶ್, ನವೀನ್ ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy