ತುಮಕೂರು: ಊರ ಹೊರಗಿನ ಗುಡಿಸಿಲಿನಲ್ಲಿ ಬಾಣಂತಿ ಮಗು ಏಕಾಂಕಿಯಾಗಿ ವಾಸ ಮಾಡುತ್ತಿದ್ದು ಕಾಡುಗೊಲ್ಲ ಸಮುದಾಯದ ಮೌಢ್ಯಾಚರಣೆಗೆ ಸಾಕ್ಷಿಯಾಗಿರುವ ಘಟನೆ ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇಂದಿಗೂ ನಡೆಯುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಊರ ಹೊರಗಿನ ಗುಡಿಸಿಲಿನಲ್ಲೇ ವಾಸ ಮಾಡುತ್ತೀರೋ ವಸಂತ ಎಂಬ ಬಾಣಂತಿಯದ್ದ ಅರಣ್ಯರೋಧನವಾಗಿದೆ. ತುಂತುರು ಮಳೆ ಚಳಿ ಗಾಳಿ ನಡುವೆ ಗುಡಿಸಿಲಿನಲ್ಲಿ ಆಕೆ ಜೀವನ ಸಾಗಿಸುತ್ತಿದ್ದಾಳೆ.
5 ದಿನಗಳ ಹಿಂದೆ ಅವಳಿ ಶಿಶುವಿಗೆ ಜನ್ಮನೀಡಿದ ವಸಂತ ಎಂಬಾಕೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಹೆರಿಗೆ ಮುಗಿಸಿ ವಾಪಸ್ ಗ್ರಾಮಕ್ಕೆ ಬಂದ ವಸಂತ ಎಂಬವರನ್ನು ಆಕೆಯ ಪೋಷಕರು ಮನೆಗೆ ಸೇರಿಸಿಕೊಂಡಿಲ್ಲ ಬದಲಾಗಿ ಊರ ಹೊರಗಿನ ಗುಡಿಸಿಲಿಗೆ ಕಳುಹಿಸಿದ್ದಾರೆ.
ಸಣ್ಣ ಗುಡಿಸಲು ಮಾಡಿ ಅದರಲ್ಲಿ ಬಾಣಂತಿ ಮತ್ತು ಮಗುವನ್ನು ಇಟ್ಟಿರುವ ಇರಿಸಲಾಗಿದೆ. ನಮ್ಮ ದೇವರಿಗೆ ಸೂತಕ ಆಗಲ್ಲ ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುತ್ತಿರುವ ಗೊಲ್ಲ ಸಮುದಾಯದವರು. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು. ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಆಗಲ್ಲ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಮುಗಿಲು ಮುಟ್ಟಿರುವ ಬಾಣಂತಿ ಮಹಿಳೆಯರ ರೋಧನ ಮಾತ್ರ ಸಂಬಂಧಪಟ್ಟವರಿಗೆ ಕೇಳದಂತಾಗಿದೆ.
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/F93PYUrewdsCfgROQBejv5