ಪಾವಗಡ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ‘ಕಾಡುಗೊಲ್ಲರ ನಡೆ ಎಸ್.ಟಿ ಮೀಸಲಾತಿ ಹೋರಾಟದ ಕಡೆಗೆ’ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕಾಡುಗೊಲ್ಲರ ಆಚಾರದಂತೆ ಮಣ್ಣಿನ ದೀಪವನ್ನು ಬೆಳಗಿಸಿ, ಕಂಬಳಿ ಜಾಡಿ ಆಕಿ ಗಣೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದರು.
ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಎಸಿಪಿ ಬಸವರಾಜ್, ನಮ್ಮ ಸಮುದಾಯದ ನಾಯಕರು ಕಾಡುಗೊಲ್ಲರ ಹೋರಾಟಕ್ಕೆ ಪ್ರಬಲವಾದ ಬೆಂಬಲವನ್ನು ಎರಡೂವರೆ ವರ್ಷಗಳಿಂದ ಕೊಡುತ್ತಿದ್ದಾರೆ. ಬೇರೆ ಬೇರೆ ಸಂಘ ಪರಿವಾರದ ನಾಯಕರಿಗೆ ನಮ್ಮ ಸ್ಥಿತಿಗತಿಗಳು ಮುಟ್ಟಿಸುವ ಕೆಲಸ ಮಾಡಿದ್ದೇವೆ.
ಇವರಿಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಧ್ಯಕ್ಷರಾದ ರಾಜಣ್ಣರವರ ಪರವಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಎಸ್.ಎಸ್.ಕೆ. ಸಂಘದ ಉಪಾಧ್ಯಕ್ಷ ಸಿ.ಎನ್.ಆನಂದ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಹೊಂದಿರುವ ಈ ಸಮುದಾಯ ಎಸ್.ಟಿ ಸೇರುವ ಅರ್ಹತೆ ಹೊಂದಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಶಿರಾ ತಾಲೂಕಿನ ಕಾಡುಗೋಲ್ಲರ ಸಂಘದ ಅಧ್ಯಕ್ಷರಾದ ಈಶ್ವರಪ್ಪ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ., ರಾಜಕೀಯವಾಗಿ, ಹಿಂದುಳಿರುವ ನಮ್ಮ ಕಾಡುಗೊಲ್ಲರ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಒಂದು ಹಾಸ್ಟೆಲ್ ಸಹ ಇಲ್ಲ. ನಮಗೆ ಸಣ್ಣ ಪುಟ್ಟ ಉದ್ಯೋಗ ಅವಕಾಶಗಳು ಇಲ್ಲ, ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲ.
ಸ್ವಾತಂತ್ರ ಬಂದು 76 ವರ್ಷ ಆದರೂ ನಮ್ಮ ಕಾಡುಗೊಲ್ಲ ಸಮುದಾಯ ಕರ್ನಾಟಕದಲ್ಲಿ ಸುಮಾರು 40 ತಾಲೂಕು, 12 ಜಿಲ್ಲೆಗಳಲ್ಲಿ ಇದ್ದು, ಇಷ್ಟು ವರ್ಷ ರಾಜಕೀಯ ಪಕ್ಷಗಳು ಮೂಗಿಗೆ ತುಪ್ಪ ಸವರಿದಂತೆ ಸರ್ಕಾರಗಳು ಮೋಸ ಮಾಡುತ್ತಿವೆ ಎಂದು ತಿಳಿಸಿದರು.
ಪಾವಗಡ ತಾಲೂಕಿನ ಕಾಡುಗೊಲ್ಲರ ಅಧ್ಯಕ್ಷರಾದ ಎಸ್.ಬೋರಪ್ಪನವರು ಮಾತನಾಡಿ, ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷರು ರಾಜಣ್ಣರವರ ಕರೆಯ ಮೇರೆಗೆ ಎಸ್.ಟಿ. ಮೀಸಲಾತಿ ಹೋರಾಟಕ್ಕೆ ಯಾವತ್ತೂ ಕರೆಯನ್ನು ಕೊಡುತ್ತೋ ಅವತ್ತಿನಿಂದ ತಾಲೂಕು ಮತ್ತು ಹೋಬಳಿಗಳ ಘಟಕದ ಉತ್ಸಾಹದಿಂದ ಪಾವಗಡ ತಾಲೂಕಿನ 75 ಗೊಲ್ಲರಟ್ಟಿಗಳಿಂದ ಮುನ್ನಡೆಯಲು ಪ್ರಾರಂಭಿಸುತ್ತೇವೆ .ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಟಿ.ಹಳ್ಳಿ ಚಿಕ್ಕಣ್ಣ, ಮುಗದಾಳಬೆಟ್ಟ ನರಸಿಂಹಪ್ಪ, ಕೆಇಬಿ ಯರ್ರಪ್ಪ, ಪಿ ಎಲ್ ಡಿ ಬ್ಯಾಂಕ್ ಚಿತ್ತಪ್ಪ, ಶಿಕ್ಷಕರಾದ ಸಣ್ಣ ಚಿತ್ತಪ್ಪ, ನಿವೃತ್ತ ಸಬ್ ಇನ್ಸ್ಪೆಕ್ಟರ್ ರಾಮಪ್ಪ, ಪಾಪಣ್ಣ, ನಾಗೇಂದ್ರಪ್ಪ ನಿಡಗಲ್ ಹೋಬಳಿ ಕಾಡುಗೊಲ್ಲರ ಅಧ್ಯಕ್ಷರು. ಚಿತ್ತಣ್ಣ ಎಸ್ ಡಿ ಎ ದೇವರಹಟ್ಟಿ, ಸಿ.ಎಚ್.ಗೋವಿಂದು, ಕೃಷ್ಣಗಿರಿ ಶಿವಕುಮಾರ್ ಹಾಗೂ ಕಾಡುಗೊಲ್ಲ ಸಮುದಾಯದ ಹಿರಿಯರು. ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ನಾಗರಾಜು, ದೇವರಹಟ್ಟಿ