ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಿ ಪ್ರೋ ತ್ಸಾಹಿಸಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಒಟ್ಟು 5890.27 ಎಕರೆ ಜಮೀನನ್ನು ಉದ್ಯಮಿಗಳಿಗೆ ಮೀಸಲಿಟ್ಟಿದೆ. ರಾಜ್ಯದಲ್ಲಿ ಹೊಸದಾಗಿ ಕೈಗಾರಿಕೆ ಆರಂಭಿಸಲು ಬರುವ ಉದ್ಯಮಿಗಳು ತಾವು ಬಯಸುವ ಜಿಲ್ಲೆಗಳಲ್ಲಿ ತತ್‍ಕ್ಷಣವೇ ಜಮೀನು ನೀಡಲು 5890.27 ಎಕರೆ ಜಮೀನನ್ನು ನೀಡಲು ಸಿದ್ದತೆ ನಡೆಸಿದೆ.
ಸುಮಾರು 2582734 ಎಕರೆಯಷ್ಟು ಭೂಮಿಯನ್ನು ಕೆಐಎಡಿಬಿಯು ಭೂ ಸ್ವಾೀಧಿನ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 14,200 ಎಕರೆ ಭೂಮಿಯನ್ನು ಸ್ವಾೀಧಿನಪಡಿಸಿಕೊಳ್ಳಲು ಮುಂದಾಗಿದೆ. ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಬಹುನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶ ಜರುಗಲಿದ್ದು, ರಾಜ್ಯಕ್ಕೆ ದೇಶ, ವಿದೇಶಗಳಿಂದ ರಾಜ್ಯಕ್ಕೆ ದೊಡ್ಡ ದೊಡ್ಡ ಉದ್ಯಮಿಗಳು ಆಗಮಿಸುವ ನಿರೀಕ್ಷೆಯಿದೆ.ಈಗಿನ ಉದ್ಯಮಿಗಳಿಗೆ ತತ್‍ಕ್ಷಣವೇ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ ತಕ್ಷಣವೇ ಅವರು ನಿರೀಕ್ಷಿಸಿದ ಕಡೆ ಭೂಮಿ, ನೀರು, ವಿದ್ಯುತ್, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಮಾತ್ರ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ.ಸ್ವಲ್ಪ ವಿಳಂಬವಾದರೆ ಈ ಉದ್ಯಮಿಗಳನ್ನು ಬೇರೆ ರಾಜ್ಯದವರು ಸೆಳೆಯುತ್ತಾರೆ. ಹಿಂದಿನ ಕೆಲವು ಕಹಿ ಘಟನೆಗಳಿಂದಾಗಿ ಕೆ ಐಎಡಿಬಿಯು ಉದ್ಯಮಿಗಳಿಗೆ ಬಯಸಿದ ಕಡೆ ಜಮೀನು ನೀಡುವುದಕ್ಕಾಗಿಯೇ 5890.27 ಎಕರೆ ಜಮೀನನ್ನು ಮೀಸಲಿಟ್ಟಿದೆ. ಬೇರೆ ರಾಜ್ಯಗಳಲ್ಲಿ ಉದ್ಯಮಿಗಳಿಗೆ ಅಲ್ಲಿನ ಸರ್ಕಾರಗಳು ತತ್‍ಕ್ಷಣವೇ ಭೂಮಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಾರೆ. ಇದರಿಂದ ಉದ್ಯಮಿಗಳು ಅಂಥ ಕಡೆಯೇ ಹೆಚ್ಚಿನ ಗಮನ ಕೊಡುತ್ತಾರೆ.ಇದನ್ನು ತಪ್ಪಿಸಲು ನಾವು ಅಗತ್ಯವಿರುವಷ್ಟು ಜಮೀನನ್ನು ಮುಂಗಡವಾಗಿಯೇ ಮೀಸಲಿಡಬೇಕು. ಒಂದು ಕಡೆ ಕೈಗಾರಿಕೆಗಳಿಗೆ ಉತ್ತೇಜನ, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಅನುಕೂಲಕರವಾದ ವಾತಾವರಣ ಮತ್ತು ಉದ್ಯೋಗ ಸೃಷ್ಟಿಗೆ ಇದು ನಮಗೆ ಉತ್ತೇಜನ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಹಿಂದೆ ಟಾಟಾ ಕಂಪನಿಯವರು ನ್ಯಾನೋ ಘಟಕದವರು ರಾಜ್ಯದಲ್ಲಿ ತೆರೆಯಲು ಮುಂದೆ ಬಂದಿದ್ದರು. ಅವರಿಗೆ ನಾವು ಸಕಾಲದಲ್ಲಿ ಭೂಮಿ ನೀಡಲು ಸಾಧ್ಯವಾಗದೆ ಇದುದ್ದರಿಂದ ಈ ಯೋಜನೆಯು ಗುಜರಾತ್ ಪಾಲಾಯಿತು.ಹೀಗಾಗಿ ಭವಿಷ್ಯದಲ್ಲಿ ಯಾವುದೇ ಯೋಜನೆಗಳು ಕೈತಪ್ಪದಂತೆ ಮುಂಜಾಗ್ರತಾ ಕ್ರಮವಾಗಿ ನಾವು ಜಮೀನನ್ನು ಮೀಸಲಿಟ್ಟಿದ್ದೇವೆ. ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ದೊಡ್ಡ ಉದ್ಯಮಿಗಳು ಆಗಮಿಸಲಿದ್ದು, ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಎಲ್ಲವೂ ಸಕಾರಾತ್ಮಕವಾಗಿಯೇ ನಡೆದಿದೆ ಎನ್ನುತ್ತಾರೆ ನಿರಾಣಿ.
ಪ್ರಸ್ತುತ ಕೋವಿಡ್ 3ನೇ ಅಲೆ ಇರುವ ಕಾರಣ ನಮ್ಮ ಯೋಜನೆಗಳಿಗೆ ಸ್ವಲ್ಪ ಹಿನ್ನಡೆಯಾಗಿದೆ. ಫೆಬ್ರವರಿ ತಿಂಗಳ ಅಂತ್ಯಕ್ಕೆ ಕೋವಿಡ್ ಅಲೆ ಅಂತ್ಯವಾದ ನಂತರ ಮತ್ತೆ ಅರ್ಥಿಕ ಚಟುವಟಕೆಗಳುಉ ಗರಿಗೆದರಲಿವೆ. ಬರುವ ದಿನಗಳು ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ಅಧ್ಯಾಯನವನ್ನು ಬರೆಯಲಿದೆ. ಇದಕ್ಕಾಗಿ ಇಲಾಖೆಯು ಸಿದ್ದತೆಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಭೂ ಸ್ವಾೀಧಿನ:
ಬೆಳಗಾವಿ -1000 ಎಕರೆ
ದಾವಣಗೆರೆ – 1000 ಎಕರೆ
ಮೈಸೂರು-1000 ಎಕರೆ
ಬಳ್ಳಾರಿ – 1000 ಎಕರೆ
ಚಿಕ್ಕಬಳ್ಳಾಪುರ – 1000 ಎಕರೆ
ಹಾವೇರಿ -1000 ಎಕರೆ
ಚಿತ್ರದುರ್ಗ-1000 ಎಕರೆ
ಹಾಸನ- 500 ಎಕರೆ
ಕೊಪ್ಪಳ – 500 ಎಕರೆ
ಉಡುಪಿ-500 ಎಕರೆ
ಚಿಕ್ಕಮಗಳೂರು- 500 ಎಕರೆ
ಶಿವಮೊಗ್ಗ – 500 ಎಕರೆ
ತುಮಕೂರು – 2000 ಎಕರೆ
ಉ.ಕನ್ನಡ, ಕೊಡುಗು-200 ಎಕರೆ
ಗದಗ -300 ಎಕರೆ
ವರದಿ: ಆಂಟೋನಿ