ಬೆಂಗಳೂರು: ಕೈ ನೋವೆಂದು ಆಸ್ಪತ್ರೆಗೆ ಬಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇದೀಗ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಯುವತಿಯನ್ನು ತೇಜಸ್ವಿನಿ(20) ಎಂದು ಗುರುತಿಸಲಾಗಿದೆ.ತೇಜಸ್ವಿನಿಯನ್ನು ಕೈನೋವೆಂದು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೇಜಸ್ವಿನಿಗೆ ಆಪರೇಷನ್ ಮಾಡಬೇಕೇಂದು ಆಸ್ಪತ್ರೆ ಸಿಬ್ಬಂದಿ ಅನಾಸ್ತೇಶಿಯಾ ನೀಡಿದ್ದಾರೆ. ಎರಡು ಗಂಟೆ ಬಳಿಕ ನಿಮ್ಮ ಮಗಳು ಬದುಕಿಲ್ಲ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾರತಹಳ್ಳಿ ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಆಸ್ಪತ್ರೆ ಬಳಿ ಪೊಲೀಸರು ಮತ್ತು ಪೋಷಕರ ನಡುವೆ ಜಟಾಪಟಿ ನಡೆದಿದೆ. ನಮಗೆ ವಿಷ ಕೊಡಿ ಇಲ್ಲ ನ್ಯಾಯ ಕೊಡಿಸಿ ಎಂದು ತೇಜಸ್ವಿನಿ ಪೋಷಕರು ಆಸ್ಪತ್ರೆ ಒಳಗೆ ಪ್ರತಿಭಟನೆಗೆ ಬಳಿ ಕುಳಿತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


